Publish Date: Sun, 26 Jul 2020 (11:00 IST)
Updated Date: Sun, 26 Jul 2020 (11:01 IST)
ಬೆಂಗಳೂರು: ಕೆಜಿಎಫ್ 1 ಸಿನಿಮಾ ಹುಟ್ಟುಹಾಕಿದ ಕ್ರೇಜ್ ಎಷ್ಟರಮಟ್ಟಿಗಿದೆ ಎಂದರೆ ಈಗ ಜನ ಕೆಜಿಎಫ್ 2 ಬಗ್ಗೆ ಕಾತುರದಿಂದ ಕಾಯುವಂತೆ ಮಾಡಿದೆ.
ಆದರೆ ಲಾಕ್ ಡೌನ್ ನಿಂದಾಗಿ ನಿಗದಿತ ಸಮಯಕ್ಕೆ ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗುವ ಲಕ್ಷಣ ತೋರುತ್ತಿಲ್ಲ. ಟೀಸರ್ ಕೂಡಾ ಬಿಡುಗಡೆಯಾಗಿಲ್ಲ. ಈ ರೀತಿ ಬೇಸರದಲ್ಲಿರುವ ಅಭಿಮಾನಿಗಳಿಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.
‘ಕೆಜಿಎಫ್ 2 ಬಗ್ಗೆ ಸದ್ಯದಲ್ಲೇ ಹೊಸ ಅಪ್ ಡೇಟ್ ಕೊಡ್ತಾ ಇದ್ದೇವೆ’ ಎಂದು ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದು, ಯಶ್ ಅಭಿಮಾನಿಗಳಲ್ಲಿ ಸಂಚಲನ ಮೂಡಿದೆ. ಹಾಗಿದ್ದರೆ ಟೀಸರ್ ಬಿಡುಗಡೆ ಮಾಡ್ತಿದ್ದೀರಾ? ಸಾಂಗ್ ರಿಲೀಸ್ ಆಗುತ್ತಾ? ಸಿನಿಮಾ ರಿಲೀಸ್ ಬಗ್ಗೆ ಹೇಳ್ತೀರಾ? ಎಂಬಿತ್ಯಾದಿ ಪ್ರಶ್ನೆಗಳನ್ನು ವೀಕ್ಷಕರು ಕೇಳುತ್ತಿದ್ದಾರೆ. ಇದಕ್ಕೆಲ್ಲಾ ಸದ್ಯದಲ್ಲೇ ಉತ್ತರ ಸಿಗಲಿದೆ.