Publish Date: Tue, 28 Jul 2020 (09:49 IST)
Updated Date: Tue, 28 Jul 2020 (09:51 IST)
ಬೆಂಗಳೂರು: ಕೆಜಿಎಫ್ 2 ಚಿತ್ರತಂಡ ಸಂಜಯ್ ದತ್ ಬರ್ತ್ ಡೇಗೆ ಭರ್ಜರಿ ಗಿಫ್ಟ್ ಕೊಡಲು ತಯಾರಿ ನಡೆಸಿದೆ. ಜುಲೈ 29 ರಂದು ಅಧೀರ ಪಾತ್ರದ ಅನಾವರಣ ಮಾಡಲಿದೆ.
ಕೆಜಿಎಫ್ 2 ಮೂಲಕ ಕನ್ನಡಕ್ಕೆ ಬರುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಇಲ್ಲಿ ರಾಕಿ ಬಾಯ್ ಯಶ್ ಗೆ ಪ್ರಮುಖ ಎದುರಾಳಿಯಾಗಿದ್ದಾರೆ. ಅವರ ಪಾತ್ರದ ಒಂದು ಲುಕ್ ಈಗಾಗಲೇ ಅನಾವರಣಗೊಂಡು ವೈರಲ್ ಆಗಿತ್ತು.
ಆದರೆ ಈಗ ಸಂಜಯ್ ದತ್ ಬರ್ತ್ ಡೇಗೆ ಅಧೀರನ ಪಾತ್ರ ಹೇಗಿರಲಿದೆ, ಆತ ಎಷ್ಟು ಕ್ರೂರಿಯಾಗಿ ಕಾಣಿಸಿಕೊಳ್ಳಲಿದ್ದಾನೆ ಎಂಬುದನ್ನು ಕೆಜಿಎಫ್ ಚಿತ್ರತಂಡ ಅನಾವರಣಗೊಳಿಸಲಿದೆ.