Publish Date: Fri, 19 Mar 2021 (10:09 IST)
Updated Date: Fri, 19 Mar 2021 (10:10 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಈ ಬಾರಿ ಬರ್ತ್ ಡೇ ದಿನ ಅಭಿಮಾನಿಗಳಿಗೆ ಸಿಗಲ್ಲ. ಕುಟುಂಬದವರ ಜೊತೆ ಹೊರಗಡೆ ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ್ದರು.
ಬರ್ತ್ ಡೇ ದಿನ ಹೊರಗೆಲ್ಲೂ ಕಾಣಿಸಿಕೊಳ್ಳದ ಪುನೀತ್ ನಿಜಕ್ಕೂ ಎಲ್ಲಿದ್ದರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪುನೀತ್ ಈಗ ಚಿಕ್ಕಮಗಳೂರಿನಲ್ಲಿ ಕುಟುಂಬ ಸಮೇತ ವಿಶ್ರಾಂತಿಯಲ್ಲಿದ್ದರು ಎಂದು ತಿಳಿದುಬಂದಿದೆ.
ಬರ್ತ್ ಡೇ ಹಿಂದಿನ ದಿನವೇ ಇಲ್ಲಿನ ಹೋಂ ಸ್ಟೇ ಒಂದಕ್ಕೆ ಬಂದಿಳಿದಿದ್ದ ಪುನೀತ್ ಪತ್ನಿ ಜೊತೆ ಸ್ಥಳೀಯ ದೇವಸ್ಥಾನವೊಂದಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇನ್ನು, ತಮ್ಮನ್ನು ಭೇಟಿ ಮಾಡಲು ಬಂದ ಅಭಿಮಾನಿಗಳಿಗೆ ಸೆಲ್ಫೀಯನ್ನೂ ನೀಡಿದ್ದಾರೆ. ಆದರೆ ಈ ವಿಚಾರವನ್ನು ಎಲ್ಲೂ ಹೊರಗಡೆ ಬಹಿರಂಗಪಡಿಸಬೇಡಿ ಎಂದು ಮನವಿ ಮಾಡಿದ್ದರಂತೆ.