Select Your Language

Notifications

webdunia
webdunia
webdunia
webdunia

ನೇತ್ರಾಣಿಯಲ್ಲಿ ನೀರಿನೊಳಗೆ ಪುನೀತ್ ಬ್ಯಾಕ್ ಫ್ಲಿಪ್: ವಿಡಿಯೋ ವೈರಲ್

ನೇತ್ರಾಣಿಯಲ್ಲಿ ನೀರಿನೊಳಗೆ ಪುನೀತ್ ಬ್ಯಾಕ್ ಫ್ಲಿಪ್: ವಿಡಿಯೋ ವೈರಲ್
ಬೆಂಗಳೂರು , ಬುಧವಾರ, 17 ಫೆಬ್ರವರಿ 2021 (10:44 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬ್ಯಾಕ್ ಫ್ಲಿಪ್ ಮಾಡುವುದರಲ್ಲಿ ಎತ್ತಿದ ಕೈ. ಆಗಾಗ ಅವರ ಫಿಟ್ನೆಸ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.


ಇತ್ತೀಚೆಗಷ್ಟೇ ಅವರು ಮುರುಡೇಶ್ವರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಸಮೀಪದ ನೇತ್ರಾಣಿಗೆ ತೆರಳಿದ್ದರು. ಅಲ್ಲಿನ ಹಿನ್ನೀರಿನಲ್ಲಿ ತಾವು ಚಲಿಸುತ್ತಿದ್ದ ಬೋಟ್ ನಿಂದ ಬ್ಯಾಕ್ ಫ್ಲಿಪ್ ಸಾಹಸ ಮಾಡಿದ ಪುನೀತ್ ಆ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಸುಮ್ನೇ ಹೇಳ್ತಾರಾ ಪವರ್ ಸ್ಟಾರ್ ಅಂತ ಎಂದು ಅವರ ಫಿಟ್ನೆಸ್ ನ್ನು ಕೊಂಡಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈಷ್ಣವ್ ತೇಜ್ ‘ಉಪ್ಪೇನಾ” ಚಿತ್ರದ 4 ದಿನಗಳ ಒಟ್ಟು ಸಂಗ್ರಹ ಎಷ್ಟು ಗೊತ್ತಾ?