ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ‘ಜೇಮ್ಸ್’ ಸಿನಿಮಾ ಸಾಹಸ ದೃಶ್ಯಗಳ ಚಿತ್ರೀಕರಣ ಮುಂದಿನ ತಿಂಗಳು ನಡೆಯಲಿದೆ.
ಲಾಕ್ ಡೌನ್ ಮುಕ್ತಾಯವಾದ ಬೆನ್ನಲ್ಲೇ ಚಿತ್ರರಂಗದಲ್ಲೂ ಶೂಟಿಂಗ್ ಶುರುವಾಗಿದೆ. ಈಗಾಗಲೇ ಹಲವು ಸಿನಿಮಾಗಳು ಶೂಟಿಂಗ್ ಗೆ ತಯಾರಿ ನಡೆಸಿದೆ. ಈಗ ಅದ್ಧೂರಿ ಚೇತನ್ ನಿರ್ದೇಶನ ಮಾಡುತ್ತಿರುವ ‘ಜೇಮ್ಸ್’ ಸಿನಿಮಾ ತಂಡದಿಂದ ಹೊಸ ಸುದ್ದಿ ಬಂದಿದೆ.
ಲಾಕ್ ಡೌನ್ ಗೂ ಮೊದಲು ಕಾಶ್ಮೀರದಲ್ಲಿ ಚಿತ್ರೀಕರಣ ಮುಗಿಸಿ ಬಂದಿದ್ದ ಚಿತ್ರತಂಡ ಜುಲೈ 5 ರ ಬಳಿಕ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಸಲು ಮುಂದಾಗಿದೆ. ಖ್ಯಾತ ಸಾಹಸ ನಿರ್ದೇಶಕರಾದ ರಾಮ್-ಲಕ್ಷ್ಮಣ್ ಸಾರಥ್ಯದಲ್ಲಿ ಚೇಸಿಂಗ್ ದೃಶ್ಯವೊಂದರ ಚಿತ್ರೀಕರಣ ನಡೆಯಲಿದೆ.