Select Your Language

Notifications

webdunia
webdunia
webdunia
webdunia

ಇಂದು ನಿರ್ಮಾಪಕ ಸೌಂದರ್ಯ ಜಗದೀಶ್ ಅಂತ್ಯಕ್ರಿಯೆ

Soundarya Jagadeesh

Krishnaveni K

ಬೆಂಗಳೂರು , ಸೋಮವಾರ, 15 ಏಪ್ರಿಲ್ 2024 (09:30 IST)
Photo Courtesy: Twitter
ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದ ಸ್ಯಾಂಡಲ್ ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಅಂತ್ಯ ಕ್ರಿಯೆ ಇಂದು ಮಧ್ಯಾಹ್ನ ನೆರವೇರಲಿದೆ.

ನಿನ್ನೆಯಷ್ಟೇ ಸೌಂದರ್ಯ ಜಗದೀಶ್ ಸಾವಿನ ಆಘಾತಕಾರೀ ಸುದ್ದಿ ಬಂದಿತ್ತು. ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಸಾವಿಗೆ ನಿಖರ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.  ಆದರೆ ವಿಪರೀತ ಸಾಲಗಳಾಗಿತ್ತು, ಇತ್ತೀಚೆಗೆ ಖಿನ್ನತೆಯಿಂದ ಬಳಲುತ್ತಿದ್ದರು ಎಂಬಿತ್ಯಾದಿ ಮಾತುಗಳು ಕೇಳಿಬರುತ್ತಿವೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಸೌಂದರ್ಯ ಜಗದೀಶ್, ಹಲವು ಸಿನಿಮಾಗಳನ್ನು ನಿರ್ಮಿಸಿದ್ದರು. ಅವರ ಪುತ್ರ ಸ್ನೇಹಿತ್ ಕೂಡಾ ನಟನಾಗಿ ಗುರುತಿಸಿಕೊಂಡಿದ್ದಾರೆ. ಅಪ್ಪನ ಸಾವಿನ ಸುದ್ದಿ ಪುತ್ರ ಸ್ನೇಹಿತ್ ನನ್ನು ತೀವ್ರ ಘಾಸಿಗೊಳಿಸಿದೆ.

ನಿನ್ನೆ ಮಧ್ಯಾಹ್ನದಿಂದ ಅವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಂದು ಬೆಳಿಗ್ಗೆಯವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ. ಅದಾದ ಬಳಿಕ ಮಧ್ಯಾಹ್ನ ಹಿರಿಸಾವೆಯಲ್ಲಿ ಸೌಂದರ್ಯ ಜಗದೀಶ್ ಅಂತಿಮ ಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಸ್ನೇಹಿತ ನಿರ್ಮಾಪಕ ಸೌಂದರ್ಯ ಜಗದೀಶ್ ಇನ್ನಿಲ್ಲ, ಸಾವಿನ ಹಿಂದೆ ಹಲವು ಶಂಕೆ