Select Your Language

Notifications

webdunia
webdunia
webdunia
webdunia

ಯಶಸ್ವಿಯಾಗಿ 100 ದಿನ ಪೂರೈಸಿದ 'ಕಾಟೇರ': ಕೇಕ್ ಕತ್ತರಿಸಿದ ಚಿತ್ರತಂಡ

Kaatera Film Completed 100 Days

Sampriya

ಬೆಂಗಳೂರು , ಶನಿವಾರ, 13 ಏಪ್ರಿಲ್ 2024 (18:31 IST)
Photo Courtesy X
ಬೆಂಗಳೂರು: 2023ರ ಡಿಸೆಂಬರ್‌ 29ರಂದು ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್‌ ಹಿಟ್ ಕಂಡ ದರ್ಶನ್ ಅಭಿನಯದ ಸಿನಿಮಾ ಕಾಟೇರ ಇದೀಗ ಯಶಸ್ವಿಯಾಗಿ 100 ದಿನವನ್ನು ಪೂರೈಸಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎರಡು ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ ಕಾಟೇರ ಸಿನಿಮಾಗೆ ಜನರು ಫಿದಾ ಆಗಿದ್ದರು. ದರ್ಶನ್ ಅವರ ಅಭಿನಯವನ್ನು ಸ್ಯಾಂಡಲ್‌ವುಡ್ ನಟ ನಟಿಯರಿಂದ ಕೊಂಡಾಡಿದರು.

ಇನ್ನೂ ಕನಸಿನ ರಾಣಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ಅವರು ಈ ಸಿನಿಮಾದಲ್ಲಿ ದರ್ಶನ್‌ಗೆ ಜೋಡಿಯಾಗಿ ನಟಿಸಿದ್ದರು. ಚಿತ್ರ ಬಿಡುಗಡೆಗೊಂಡ ದಿನದಿಂದಲೇ ಹೌಸ್‌ಫುಲ್ ಪ್ರದರ್ಶನ ಕಂಡೂ, ಕನ್ನಡ ಸಿನಿಮಾ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿತು.

ಇನ್ನು 100 ದಿನದ ಸಂಭ್ರಮವನ್ನು ಚಿತ್ರತಂಡ ಆಚರಿಸಿದೆ. ನಿರ್ದೇಶಕ ತರುಣ್ ಸುಧೀರ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಸೇರಿದಂತೆ ತಂಡದ ಇತರ ಸದಸ್ಯರು ಈ ಸಂಭ್ರಮದಲ್ಲಿದ್ದರು. ಕೇಕ್‌ ಕಟ್‌ ಮಾಡಿ ತಂಡ ಸಂಭ್ರಮಿಸಿದೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಷರಾಮಿ ಮನೆಯ ಒಡತಿಯಾದ ಪ್ರಿಯಾಂಕ ಚಿಂಚೋಳಿ: ಗೃಹಪ್ರವೇಶದ ಫೋಟೋ ಹಂಚಿಕೊಂಡ 'ಮನಸೆಲ್ಲ' ನಟಿ