Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ, ತನಿಖೆ ಚುರುಕು

Salman Khan

Sampriya

ಮುಂಬೈ , ಭಾನುವಾರ, 14 ಏಪ್ರಿಲ್ 2024 (10:33 IST)
Photo Courtesy X
ಮುಂಬೈ: ಇಂದು ಮುಂಜಾನೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ಇಬ್ಬರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಮುಂಜಾನೆ 5 ಗಂಟೆಗೆ, ಬಾಂದ್ರಾದಲ್ಲಿರುವ ಖಾನ್ ಅವರ ಮನೆಯ ಹೊರಗೆ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಗಾಳಿಯಲ್ಲಿ ಐದು ಸುತ್ತು ಗುಂಡು ಹಾರಿಸಿ, ಅಲ್ಲಿಂದ್ದ ಎಸ್ಕೇಪ್ ಆಗಿದ್ದಾರೆ .

ಸಲ್ಮಾನ್ ಮನೆಯ ಮೊದಲ ಮಹಡಿಗೆ ಗುಂಡು ತಗುಲಿದೆ. ಗುಂಡಿನ ದಾಳಿಗೆ ವಿದೇಶಿ ಪಿಸ್ತೂಲ್ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈ ಪೊಲೀಸರು ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ಗುಂಡು ಹಾರಿಸಿದ ವ್ಯಕ್ತಿಗಳ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ.

ಕಳೆದ ವರ್ಷ ಏಪ್ರಿಲ್ 11 ರಂದು ಬಂದ ಬೆದರಿಕೆ ಕರೆಯಿಂದ ಮುಂಬೈ ಪೊಲೀಸರು ಸಲ್ಮಾನ್ ಖಾನ್‌ಗೆ  ಭದ್ರತಾ ಸ್ಥಿತಿಯನ್ನು Y+ ಗೆ ಹೆಚ್ಚಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಯಶಸ್ವಿಯಾಗಿ 100 ದಿನ ಪೂರೈಸಿದ 'ಕಾಟೇರ': ಕೇಕ್ ಕತ್ತರಿಸಿದ ಚಿತ್ರತಂಡ