Select Your Language

Notifications

webdunia
webdunia
webdunia
webdunia

ಕತ್ರೀನಾ ಕೈಫ್‌ಗೆ ತುಂಬಾ ಖುಷಿಕೊಟ್ಟ ಸಂಗತಿ ಯಾವುದು ಗೊತ್ತಾ?

Katrina Kaif

rajesh

mumbai , ಗುರುವಾರ, 25 ಜನವರಿ 2024 (14:20 IST)
ಇತ್ತೀಚೆಗೆ ಕತ್ರೀನಾ ಕೈಫ್ ಅವರಿಗೆ ಮುನ್ನಿಯನ್ನು ಭೇಟಿ ಮಾಡೋ ಅವಕಾಶ ಸಿಕ್ಕಿತ್ತಂತೆ. ಅದು ಯಶ್ ರಾಜ್ ಸ್ಟುಡಿಯೋದಲ್ಲಿ. ಈ ವೇಳೆ ಕೆಲ ಹೊತ್ತು ಕ್ಯಾಟ್ ಮುನ್ನಿ ಜೊತೆ ಕಳೆದ್ರಂತೆ ಅಲ್ಲದೇ ಆಕೆಯ ನಟನೆಯನ್ನು  ಪ್ರಶಂಸಿದ್ರಂತೆ.

ಅಲ್ಲದೇ ಮುನ್ನಿ ಜೊತೆ ಫೋಟೋಗೂ ಪೋಸ್ ಕೊಟ್ರಂತೆ. ಇನ್ನು ಮುನ್ನಿ ಜೊತೆ ಕಾಲ ಕಳೆದದ್ದು ಕತ್ರೀನಾಗೆ ತುಂಬಾನೇ ಖುಷಿ ಕೊಟ್ಟಿತ್ತೆಂತೆ. ಅವರ ಬಾಲ್ಯದ ದಿನಗಳನ್ನು ನೆನಪಿಸಿತ್ತಂತೆ.
 
ಮುನ್ನಿ. ಈ ಹೆಸರು ಹೇಳಿದ್ರೇನೇ ಭಜರಂಗಿ ಭಾಯಿಜಾನ್ ಚಿತ್ರದಲ್ಲಿನ ಮುನ್ನಿ ಅಭಿನಯ ಕಣ್ಣೆದುರು ಸುಳಿದಾಡುತ್ತೆ. ತನ್ನ ಮುಗ್ಧ ಹಾಗೂ ಮನೋಜ್ಞ ಅಭಿನಯದ ಮೂಲಕ ಬಾಲ ನಟಿ ಹರ್ಷಾಲಿ ಮಲ್ಹೋತ್ರಾ ಈಗಾಗಲೇ ವಿಶ್ವದಾದ್ಯಂತ ಮನೆ ಮಾತಾಗಿದ್ದಾಳೆ. ಅಲ್ಲದೇ ಆಕೆಯ ನಟನೆಗೆ ಬಾಲಿವುಡ್ ನಟ- ನಟಿಯರೂ ಕೂಡ ಫಿದಾ ಆಗಿದ್ದಾರೆ. ಅದರಲ್ಲಿ ಕತ್ರೀನಾ ಕೈಫ್ ಕೂಡ ಒಬ್ಬರು.
 
ಸದ್ಯ ಕತ್ರೀನಾ ಕೈಫ್ ಅಭಿನಯದ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಸಲ್ಮಾನ್ ಖಾನ್ ಕತ್ರೀನಾ ಗೆ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಣಬೀರ್ ಕಪೂರ್ ಜೊತೆ ಜಗ್ಗ ಜಾಸೂಸ್ ನಲ್ಲೂ ಕತ್ರೀನಾ ಕಾಣಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಬಗ್ಗೆ ಜಾಕ್ವೆಲಿನ್ ಹೇಳಿದ್ದೇನು ಗೊತ್ತಾ?