Publish Date: Thu, 19 May 2022 (22:36 IST)
Updated Date: Thu, 19 May 2022 (22:41 IST)
ಈಗಾಗಲೇ, ನಟಿ ರಮ್ಯಾ ಹಾಗೂ ಅಶ್ವಿತಿ ಶೆಟ್ಟಿ ಚಿತ್ರರಂಗದಲ್ಲಿರುವ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಇದೀಗ ಪ್ರಿಯಾಂಕಾ ಉಪೇಂದ್ರ ಕೂಡ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ನಾನು ಮಾಡೆಲಿಂಗ್‌ನಲ್ಲಿದ್ದೆ. ನಾನು ತುಂಬಾ ಹೈಟ್ ಇಲ್ಲ. ಅವಾಗ ಮಾಡೆಲಿಂಗ್‌ನಲ್ಲೂ ಅಭದ್ರತೆ ನನಗೆ ಕಾಡುತ್ತಿತ್ತು ಹೈಟ್ ಇಲ್ಲ ಅಂತ. ಭಾಷೆ ಬರಲ್ಲ ಅಂತಲೂ ಕೆಲವು ಆಫರ್ಸ್ ಕೈತಪ್ಪಿ ಹೋಯ್ತು. ಎಷ್ಟೋ ಆಡಿಷನ್‌ನಲ್ಲಿ ನನ್ನನ್ನ ಸೆಲೆಕ್ಟ್ ಮಾಡಲಿಲ್ಲ. ಆನಂತರ ನನಗೇನೋ ಒಳ್ಳೆ ಆಫರ್ಸ್ ಬಂತು. ಆದರೆ, ಅದಕ್ಕೂ ಮುನ್ನ ನಾನು ಕೂಡ ಎಲ್ಲವನ್ನೂ ಫೇಸ್ ಮಾಡಿದ್ದೇನೆ. ಆದರೆ, ನಾವು ಬೇಜಾರು ಮಾಡಿಕೊಳ್ಳಬಾರದು.
ಈಗಲೂ ನನಗೆ ಹೇಳ್ತಾರೆ.. ದಪ್ಪ ಆಗಿದ್ದೀರಾ, ಜಾಸ್ತಿ ಮೇಕಪ್ ಮಾಡ್ತೀರಾ ಅಂತೆಲ್ಲಾ ಮಾತಾಡ್ತಾರೆ. ಆದರೆ, ನಾವು ತಲೆ ಕೆಡಿಸಿಕೊಳ್ಳಬಾರದು. ನಮ್ಮನ್ನ ನಾವು ಪ್ರೀತಿಸಬೇಕು. ನಾವು ಆರೋಗ್ಯವಾಗಿ ಇರಬೇಕು. ಅದಕ್ಕಿಂತಲೂ ದೊಡ್ಡದು ಬೇರೇನೂ ಇಲ್ಲ. ಆರೋಗ್ಯವೇ ಇಲ್ಲ ಅಂದ್ರೆ ಬೇರೆ ಏನಿದ್ದು ಏನು ಪ್ರಯೋಜನ..? ಎಂದು ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.