Select Your Language

Notifications

webdunia
webdunia
webdunia
webdunia

ಅಶ್ವತ್ಥಾಮನಾಗಿ ಮಿಂಚಲು ರೆಡಿಯಾದ ಶಿವರಾಜ್ ಕುಮಾರ್

ಅಶ್ವತ್ಥಾಮನಾಗಿ ಮಿಂಚಲು ರೆಡಿಯಾದ ಶಿವರಾಜ್ ಕುಮಾರ್
ಬೆಂಗಳೂರು , ಗುರುವಾರ, 19 ಮೇ 2022 (09:53 IST)
ಬೆಂಗಳೂರು: ಮಹಾಭಾರತದ ಅಶ್ವತ್ಥಾಮನಾಗಿ ಮಿಂಚಲು ಶಿವರಾಜ್ ಕುಮಾರ್ ರೆಡಿಯಾಗಿದ್ದಾರೆ. ಅವರ ಹೊಸ ಸಿನಿಮಾ ಸೆಪ್ಟೆಂಬರ್ ನಲ್ಲಿ ಆರಂಭವಾಗಲಿದೆ.

ಅಶ್ವತ್ಥಾಮ ಎಂಬ ಟೈಟಲ್ ನೊಂದಿಗೆ ಶಿವರಾಜ್ ಕುಮಾರ್ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮಹಾಭಾರತದ ಅಶ್ವತ್ಥಾಮನ ಪಾತ್ರ ಮಾಡಲಿದ್ದಾರೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ಸೂಪರ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಸಚಿನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯಕ್ಕೆ ವೇದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿರುವ ಶಿವಣ್ಣ ಇದು ಮುಗಿದ ಬೆನ್ನಲ್ಲೇ ಅಂದರೆ ಸೆಪ್ಟೆಂಬರ್ ನಿಂದ ಅಶ್ವತ್ಥಾಮ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಲಿವುಡ್ ನಟಿ ಮಾಳವಿಕಾಗೆ ರಾಕಿ ಭಾಯಿ ಯಶ್ ಜೊತೆ ನಟಿಸುವಾಸೆಯಂತೆ