Publish Date: Sun, 10 Jul 2022 (17:13 IST)
Updated Date: Sun, 10 Jul 2022 (17:16 IST)
ಬೆಂಗಳೂರು: ಜೇಮ್ಸ್ ಚಿತ್ರದ ನಾಯಕಿ ಪ್ರಿಯಾ ಆನಂದ್ ಇತ್ತೀಚೆಗೆ ನಿತ್ಯಾನಂದ ಸ್ವಾಮಿ ಜೊತೆ ಮದುವೆ ಆಗುವುದಾಗಿ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ಭಾರೀ ವೈರಲ್ ಆಗಿತ್ತು. ಇದೀಗ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಯೂ ಟ್ಯೂಬ್ ಸಂದರ್ಶನವೊಂದರಲ್ಲಿ ಪ್ರಿಯಾ ಆನಂದ್ ಮದುವೆ ಆಗುವುದಾದರೆ ನಿತ್ಯಾನಂದ ಸ್ವಾಮಿ ಜೊತೆ ಆಗುತ್ತೇನೆ. ಆಗ ನನ್ನ ಹೆಸರು ಬದಲಾಯಿಸುವ ಕೆಲಸವೂ ಇರಲ್ಲ ಎಂದು ತಮಾಷೆಯಾಗಿ ಹೇಳಿಕೊಂಡಿದ್ದರು. ಅವರು ಇಂತಹದ್ದೊಂದು ಹೇಳಿಕೆ ನೀಡುತ್ತಿದ್ದಂತೇ ಸಾಕಷ್ಟು ಮೆಮೆಗಳು, ಮಿಮ್ಸ್ ಕ್ರಿಯೇಟ್ ಆದವು.
ಇದರ ಬೆನ್ನಲ್ಲೇ ಈಗ ಪ್ರಿಯಾ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದು, ನಾನು ಆ ಹೇಳಿಕೆಯನ್ನು ತಮಾಷೆಗಾಗಿ ನೀಡಿದ್ದೇನೆಯೇ ಹೊರತು ಇದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದಿದ್ದಾರೆ.