Select Your Language

Notifications

webdunia
webdunia
webdunia
webdunia

Prithwi Bhat marriage: ಮದುವೆ ಬಳಿಕ ಗಾಯಕಿ ಪೃಥ್ವಿ ಭಟ್ ಮೊದಲ ಬಾರಿಗೆ ಗಂಡನ ಜೊತೆ ಇರುವ ಫೋಟೋ ರಿವೀಲ್

Prithwi Bhat husband

Krishnaveni K

ಬೆಂಗಳೂರು , ಮಂಗಳವಾರ, 29 ಏಪ್ರಿಲ್ 2025 (14:20 IST)
ಬೆಂಗಳೂರು: ಪ್ರೀತಿಸಿ ಮನೆಯವರ ಒಪ್ಪಿಗೆಯಿಲ್ಲದೇ ಮದುವೆಯಾಗಿ ಭಾರೀ ಸುದ್ದಿಯಾಗಿದ್ದ ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಗಂಡನ ಜೊತೆಗಿರುವ ಮೊದಲ ಫೋಟೋವೊಂದು ಈಗ ರಿವೀಲ್ ಆಗಿದೆ.

ಜೀ ಕನ್ನಡ ವಾಹಿನಿಯ ಸರಿಗಮಪ ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ಕಾಸರಗೋಡು ಮೂಲದ ಗಾಯಕಿ ಪೃಥ್ವಿ ಭಟ್ ಮಾರ್ಚ್ 27 ರಂದು ಮನೆಯವರ ಒಪ್ಪಿಗೆಯಿಲ್ಲದೇ ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುವ ಅಭಿಷೇಕ್ ಎಂಬವರ ಜೊತೆ ಮದುವೆಯಾಗಿದ್ದರು.

ಈ ವಿಚಾರದ ಬಗ್ಗೆ ಸ್ವತಃ ಪೃಥ್ವಿ ಭಟ್ ತಂದೆ ನೀಡಿದ ಅಡಿಯೋ ಹೇಳಿಕೆಯೊಂದು ವೈರಲ್ ಆಗಿತ್ತು. ಇದಾದ ಬಳಿಕ ಪೃಥ್ವಿ ಭಟ್ ಕೂಡಾ ಅಡಿಯೋ ಬಿಡುಗಡೆ ಮಾಡಿ ತಾವು ಮನೆ ಬಿಟ್ಟು ಬಂದು ಮದುವೆಯಾಗಿದ್ದು ಯಾಕೆ ಎಂದು ಸ್ಪಷ್ಟನೆ ನೀಡಿದ್ದರು.

ಇದೀಗ ದಂಪತಿ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಪ್ರಕಟಿಸಿದ್ದಾರೆ. ಜೀ ಕನ್ನಡ ಸರಿಗಮಪ ತಂಡದ ಜೊತೆ ಅಭಿಷೇಕ್ ಮತ್ತು ಪೃಥ್ವಿ ಮಂತ್ರಾಲಯಕ್ಕೆ ತೆರಳಿದ್ದಾರೆ. ಮಂತ್ರಾಲಯದಲ್ಲಿ ರಾಯರ ಸನ್ನಿಧಿಯಲ್ಲಿ ಪೃಥ್ವಿ ಜೊತೆಗಿರುವ ಫೋಟೋವನ್ನು ಅಭಿಷೇಕ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಈ ಫೋಟೋಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದು ಮದುವೆಗೆ ಅಭಿನಂದನೆ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Pahalgam Attack, ದುಃಖದ ಸಮಯದಲ್ಲಿ ದೇಶ ಮೆಚ್ಚುವ ನಿರ್ಧಾರ ಕೈಗೊಂಡ ನಟ ಸಲ್ಮಾನ್ ಖಾನ್‌