ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಪರಿಸ್ಥಿತಿ ಈಗ ಏನಾಗಿದೆ ನೋಡಿ. ಇದು ನಿಜಕ್ಕೂ ನಟಿಗೆ ಶಾಕಿಂಗ್ ಸುದ್ದಿಯಾಗಿದೆ.
ದುಬೈನಿಂದ ಕಳ್ಳ ಸಾಗಣಿಕೆ ಮಾಡಿರುವ ಆರೋಪದಲ್ಲಿ ಮಾರ್ಚ್ ನಲ್ಲಿ ನಟಿ ರನ್ಯಾ ರಾವ್ ಬಂಧನವಾಗಿತ್ತು. ಇದಾದ ಬಳಿಕ ಅವರು ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆ ಇನ್ನೂ ಜಾರಿಯಲ್ಲಿದೆ. ಇದರ ನಡುವೆ ಅವರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ.
ನಟಿ ರನ್ಯಾ ರಾವ್ ದುಬೈನಿಂದ 100 ಕೆ.ಜಿ.ಯಷ್ಟು ಚಿನ್ನ ಕಳ್ಳಸಾಗಣಿಕೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಹೀಗಾಗಿ ಅವರ ವಿರುದ್ಧ ಕಾಫಿಪೋಸಾ ಕಾಯಿದೆ (COFEPOSA Act) ಜಾರಿ ಮಾಡಲಾಗಿದೆ. ಇದರ ಅನ್ವಯ ಅವರು ಈಗ 1 ವರ್ಷ ಅನಿವಾರ್ಯವಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. ಕಾಫಿಪೋಸಾ ಕಾಯಿದೆ ವಿದೇಶೀ ವಿನಿಯಮ ನಿಯಂತ್ರಣ ಮತ್ತು ಕಳ್ಳಸಾಗಣಿಕೆ ತಡೆಯುವ ಕಾಯಿದೆಯಾಗಿದೆ. ಈ ಕಾಯಿದೆಯಡಿ ಆರೋಪಿಗೆ ಜಾಮೀನು ಸಿಗುವುದಿಲ್ಲ. ಹೊರಗೆ ಬಂದರೆ ಈ ಆರೋಪಿಗಳು ಮತ್ತೆ ಕಳ್ಳಸಾಗಣಿಕೆ ಮಾಡುವ ಅಪಾಯವಿದೆ ಎಂಬ ಕಾರಣಕ್ಕೆ ಈ ಕಾಯಿದೆಯಡಿ ಕೇಸ್ ದಾಖಲಿಸಲಾಗುತ್ತದೆ.