ಚೆನ್ನೈ: ಚೆಪಾಕ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಸೋಲು ಅನುಭವಿಸಿತು. ಹೈದರಾಬಾದ್ ತಂಡ ಚೆನ್ನೈ ತಂಡವನ್ನು ಅದರ ತವರು ನೆಲದಲ್ಲಿ ಐದು ವಿಕೆಟ್‌ಗಳಿಂದ ಸೋಲಿಸಿತು.
 
									
			
			 
 			
 
 			
					
			        							
								
																	ನಟ ಅಜಿತ್ ಕುಮಾರ್, ಶಿವಕಾರ್ತಿಕೇಯನ್ ದಂಪತಿ, ನಟಿ ಶ್ರುತಿ ಹಾಸನ್ ಮತ್ತು ಹಲವಾರು ಕಾಲಿವುಡ್ ಸೆಲೆಬ್ರಿಟಿಗಳು ಪಂದ್ಯವನ್ನು ಲೈವಾ ಆಗಿ ವೀಕ್ಷಿಸಲು ಸ್ಟೇಡಿಂಯಗೆ ಬಂದಿದ್ದರು.
									
										
								
																	CSK ಸೋತ ನಂತರ ಶ್ರುತಿ ಹಾಸನ್ ಭಾವುಕರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಶ್ರುತಿ ಹಾಸನ್ ಅವರು ಕಣ್ಣೀರು ಒರೆಸುತ್ತಿರುವುದನ್ನು ನೋಡಬಹುದು.  ಸ್ನೇಹಿತರೊಂದಿಗೆ ಪಂದ್ಯಕ್ಕೆ ಹಾಜರಾಗಿದ್ದ ಶ್ರುತಿ ಅವರು ಸಿಎಸ್‌ಕೆ ಬ್ಯಾಟಿಂಗ್ ಪ್ರದರ್ಶನವನ್ನು ಎಂಜಾಯ್ ಮಾಡಿ, ಹುರಿದುಂಬಿಸುತ್ತಿದ್ದರು.
									
											
							                     
							
							
			        							
								
																	ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್‌ಗೆ ಬರುತ್ತಿದ್ದಂತೆ ಶೃತಿ ಹಾಸನ್ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಅವರ ಫೋಟೋಗಳನ್ನು ತೆಗೆದು, ಸಂತೋಷಪಟ್ಟರು. ಆದಾಗ್ಯೂ, ಸಿಎಸ್‌ಕೆ ಪಂದ್ಯದಲ್ಲಿ ಸೋತಾಗ ಅವರು ನಿರಾಶೆಗೊಂಡರು, ಇದು ಅವಳ ಕಣ್ಣೀರಿಗೆ ಕಾರಣವಾಯಿತು.
									
			                     
							
							
			        							
								
																	ತವರು ನೆಲದಲ್ಲಿ ಸಿಎಸ್‌ಕೆ ಸೋಲುವ ಮೂಲಕ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತು.
ಈ ಫಲಿತಾಂಶದೊಂದಿಗೆ, CSK ಪ್ಲೇಆಫ್‌ಗಳ ರೇಸ್‌ನಿಂದ ಬಹುತೇಕ ನಿರ್ಗಮಿಸಿದೆ. ಮುಂದಿನ ದಿನಗಳಲ್ಲಿ ಪವಾಡಗಳ ರೀತಿಯಲ್ಲಿ ಮಾತ್ರ ಪ್ಲೇ ಆಫ್ ರೇಸ್‌ಗೆ ಬರಬೇಕು. ಮುಂದಿನ ಐದು ಪಂದ್ಯಾಟಗಳಲ್ಲಿ ಸಿಎಸ್‌ಕೆ ಗಮನಾರ್ಹ ಅಂತರದಿಂದ ಗೆಲ್ಲಬೇಕು. ಇಲ್ಲಿಯವರೆಗೆ, CSK ಒಂಬತ್ತು ಪಂದ್ಯಗಳನ್ನು ಆಡಿದೆ, ಕೇವಲ ಎರಡರಲ್ಲಿ ಗೆದ್ದಿದೆ ಮತ್ತು ಪ್ರಸ್ತುತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.