ಬೆಂಗಳೂರು: ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿರುವುದು ವಿವಾದವಾಗಿರುವ ಬೆನ್ನಲ್ಲೇ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಲವ್ ಮ್ಯಾರೇಜ್ ಎಲ್ಲರಿಗೂ ಮಾದರಿ ಎನ್ನಬಹುದು.
ವಿಜಯ್ ಪ್ರಕಾಶ್ ಮತ್ತು ಮಹತಿ ಪ್ರೀತಿಸಿ ಮದುವೆಯಾದವರು. ಆದರೆ ಮನೆಯವರ ಒಪ್ಪಿಗೆ ಪಡೆದೇ ಮದುವೆಯಾದವರು. ಅವರ ಲವ್ ಸ್ಟೋರಿ ನಿಜಕ್ಕೂ ಈಗಿನ ಜನರೇಷನ್ ನವರಿಗೆ ಮಾದರಿಯಾಗಬೇಕು.
ವಿಜಯ್ ಪ್ರಕಾಶ್ ಚಿಕ್ಕವಯಸ್ಸಿನಲ್ಲೇ ಮನೆ ಬಿಟ್ಟು ಮುಂಬೈಗೆ ಕೆಲಸ ಅರಸಿಕೊಂಡು ಹೋದವರು. ಅಲ್ಲಿ ಜಾಹೀರಾತುಗಳಿಗೆ ಧ್ವನಿ ನೀಡುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದರು. ಈ ವೇಳೆ ಅವರಿಗೆ ಮಹತಿ ಪರಿಚಯವಾಗಿದ್ದರು. ಅವರು ಕೂಡಾ ಮೂಲತಃ ಜಾಹೀರಾತುಗಳಿಗೆ ವಾಯ್ಸ್ ಓವರ್ ಮಾಡುತ್ತಿದ್ದರು.
ಮಹತಿ ಮುಂದೆ ಪ್ರಪೋಸ್ ಮಾಡಿದಾಗ ವಿಜಯ್ ಪ್ರಕಾಶ್ ಗೆ ಅವರು ಮೊದಲು ನಮ್ಮ ತಂದೆಯನ್ನು ಕೇಳು. ಒಪ್ಪಿಗೆ ಕೊಟ್ಟರೆ ಮದುವೆಯಾಗುತ್ತೇನೆ ಎಂದಿದ್ದರಂತೆ. ಅವರು ತಾವಾಗಿಯೇ ನಿರ್ಧಾರ ತೆಗೆದುಕೊಳ್ಳದೇ ತಂದೆ-ತಾಯಿಗೆ ಬೆಲೆ ಕೊಟ್ಟರು. ಬಳಿಕ ವಿಜಯ್ ಪ್ರಕಾಶ್ ನೇರವಾಗಿ ಮಹತಿ ತಂದೆಯವರ ಮುಂದೆ ಮದುವೆ ಪ್ರಸ್ತಾಪವಿಟ್ಟಾಗ ಸ್ವಂತ ಮನೆ ಮಾಡಿಕೊಳ್ಳಲು ಹೇಳಿದ್ದರಂತೆ. ಅದರಂತೆ ಹಠಕ್ಕೆ ಬಿದ್ದು ವಿಜಯ್ ಪ್ರಕಾಶ್ ಸ್ವಂತ ಮನೆ ಮಾಡಿಕೊಂಡೇ ನಂತರ ಮಹತಿಯನ್ನು ಮದುವೆಯಾದರು. ಇದನ್ನು ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ಹೇಳಿಕೊಂಡಿದ್ದರು. ಅವರ ಈ ಲವ್ ಸ್ಟೋರಿ ನಿಜಕ್ಕೂ ಅನುಕರಣೀಯ. ಮದುವೆ, ಪ್ರೀತಿ ಏನೇ ಇದ್ದರೂ ಹೆತ್ತು-ಹೊತ್ತು ಬೆಳೆಸಿದ ತಂದೆ-ತಾಯಿಯನ್ನು ಒಪ್ಪಿಸಿ ಆಗಬೇಕು ಎಂದು ಅವರು ಸಂದೇಶ ಸಾರಿದ್ದರು.