ಮತ್ತೇ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಿದ ರಾಜಕುಮಾರ ಬೆಡಗಿ, ಜೂ.ಟೈಗರ್‌ಗೆ ಜೋಡಿಯಾದ ಸೌತ್ ಬ್ಯೂಟಿ

Sampriya
ಶುಕ್ರವಾರ, 3 ಜನವರಿ 2025 (18:12 IST)
Photo Courtesy X
ಬೆಂಗಳೂರು: ಕನ್ನಡದ ರಾಜಕುಮಾರ ಸೇರಿದಂತೆ ಜೇಮ್ಸ್‌, ಆರೆಂಜ್, ಕರಟಕ ದಮನಕ ಸಿನಿಮಾದಲ್ಲಿ ಅಭಿನಯಿಸಿದ್ದ ಸೌತ್ ಬ್ಯೂಟಿ ಪ್ರಿಯಾ ಆನಂದ್‌ಗೆ ಇದೀಗ ಕನ್ನಡದಲ್ಲಿ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ರಾಜಕುಮಾರ ಸಿನಿಮಾದ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದ ಪ್ರಿಯಾ ಆನಂದ್‌ಗೆ ಇದೀಗ ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಭಿನಯಿಸಲಿದ್ದಾರೆ.

ಈ ಮೂಲಕ ಪ್ರಿಯಾ ಅವರು  ಬಲರಾಮನ ಅಡ್ಡಾಗೆ ಅವರು ಎಂಟ್ರಿ ಕೊಟ್ಟಿದ್ದಾರೆ. ಪವರ್‌ಫುಲ್‌ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

ವಿನೋದ್ ಪ್ರಭಾಕರ್ ನಟನೆಯ 25ನೇ ಚಿತ್ರಕ್ಕೆ ‘ಬಲರಾಮನ ದಿನಗಳು’ ಎಂದು ಟೈಟಲ್ ಫಿಕ್ಸ್ ಆಗಿದೆ. ಈ ಚಿತ್ರದಲ್ಲಿ ಪ್ರಿಯಾ ನಾಯಕಿಯಾಗಿದ್ದು, ಈಗಾಗಲೇ ಚಿತ್ರೀಕರಣ ಶುರುವಾಗಿದೆ. ‌

ಈ ಕುರಿತು ಚಿತ್ರತಂಡ ಕೂಡ ಅಧಿಕೃತವಾಗಿ ತಿಳಿಸಿದೆ. 80ರ ಕಾಲಘಟ್ಟದ ಭೂಗತಲೋಕದ ಹಿನ್ನೆಲೆಯುಳ್ಳ ವಿಭಿನ್ನ ಕಥೆ ಇದಾಗಿದೆ. ಇದಕ್ಕೆ ‘ಆ ದಿನಗಳು’ ನಿರ್ದೇಶಕ ಕೆ.ಎಂ ಚೈತನ್ಯ ನಿರ್ದೇಶನ ಮಾಡಲಿದ್ದಾರೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

ಮುಂದಿನ ಸುದ್ದಿ
Show comments