Publish Date: Sat, 23 Oct 2021 (09:07 IST)
Updated Date: Sat, 23 Oct 2021 (09:12 IST)
ಬೆಂಗಳೂರು: ಕನ್ನಡ ಚಿತ್ರರಂಗದ ಒಂದು ಕಾಲದ ಬಹುಬೇಡಿಕೆಯ ನಟಿ ಪ್ರೇಮಾ ಕೆಲವು ಸಮಯದಿಂದ ಬಣ್ಣದ ಲೋಕದಿಂದ ದೂರವೇ ಉಳಿದಿದ್ದರು. ಆದರೆ ಇದೀಗ ಮತ್ತೆ ಪ್ರೇಮಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ.
ಉಪೇಂದ್ರ ಮತ್ತೆ ಹುಟ್ಟಿ ಬಾ ಅವರ ಕೊನೆಯ ಚಿತ್ರವಾಗಿತ್ತು. ಇದೀಗ ಬರೋಬ್ಬರಿ ಮೂರೂವರೆ ವರ್ಷಗಳ ಗ್ಯಾಪ್ ಬಳಿಕ ವೆಡ್ಡಿಂಗ್ ಗಿಫ್ಟ್ ಎನ್ನುವ ಸಿನಿಮಾ ಮೂಲಕ ಸಿನಿಮಾಗೆ ಎಂಟ್ರಿಕೊಡುತ್ತಿದ್ದಾರೆ.
ಈ ಸಿನಿಮಾದಲ್ಲಿ ಪ್ರೇಮಾ ಲಾಯರ್ ಪಾತ್ರ ಮಾಡಲಿದ್ದಾರಂತೆ. ಬಹುತೇಕ ಹೊಸಬರ ತಾರಾಗಣವಿರುವ ಈ ಸಿನಿಮಾದಲ್ಲಿ ಪ್ರೇಮಾ ಡಿಫರೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.