ಬೆಂಗಳೂರು: ಚಿರಂಜೀವಿ ಸರ್ಜಾ-ಮೇಘನಾ ದಂಪತಿ ಪುತ್ರ ರಾಯನ್ ರಾಜ್ ಸರ್ಜಾಗೆ ಇಂದು ವರ್ಷ ತುಂಬಿದ ಸಂಭ್ರಮ. ಮುದ್ದು ಮಗುವಿನ ಹುಟ್ಟುಹಬ್ಬವನ್ನು ಮೇಘನಾ ಸಂಭ್ರಮದಿಂದಲೇ ಆಚರಿಸಿಕೊಳ್ಳುತ್ತಿದ್ದಾರೆ.
ಮಗನ ಜೊತೆಗಿನ ಮುದ್ದಾದ ಕ್ಷಣದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಮೇಘನಾ ರಾಯನ್ ಗೆ ಮೊದಲ ವರ್ಷದ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಇನ್ನು, ರಾಯನ್ ಗೆ ಮೇಘನಾ-ಚಿರು ಸ್ನೇಹಿತರೂ ವಿಶೇಷ ಉಡುಗೊರೆಗಳ ಮೂಲಕ ಶುಭ ಕೋರಿದ್ದಾರೆ. ಮೊನ್ನೆಯಷ್ಟೇ ಚಿರು ಸರ್ಜಾ ಬರ್ತ್ ಡೇ ಇತ್ತು. ಇಂದು ಮಗನ ಬರ್ತ್ ಡೇ. ಚಿರು ಅಗಲಿದ್ದರೂ ಮಗನ ಮೊದಲ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಮೇಘನಾ ತೀರ್ಮಾನಿಸಿದ್ದಾರೆ.