Select Your Language

Notifications

webdunia
webdunia
webdunia
webdunia

ಅಲ್ಲು ಅರ್ಜುನ್ ಆರೋಗ್ಯಕ್ಕಾಗಿ ಅಭಿಮಾನಿಗಳಿಂದ ಪ್ರಾರ್ಥನೆ

ಅಲ್ಲು ಅರ್ಜುನ್ ಆರೋಗ್ಯಕ್ಕಾಗಿ ಅಭಿಮಾನಿಗಳಿಂದ ಪ್ರಾರ್ಥನೆ
ಹೈದರಾಬಾದ್ , ಶುಕ್ರವಾರ, 30 ಏಪ್ರಿಲ್ 2021 (16:54 IST)
ಹೈದರಾಬಾದ್ : ಟಾಲಿವುಡ್ ನಟ ಅಲ್ಲು ಅರ್ಜುನ್ ಅವರು ಇತ್ತೀಚೆಗೆ ಕೊರೊನಾ ಸೋಂಕಿಗೆ ಒಳಗಾಗಿ ಹೋಂ-ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ ನಟ ಅಲ್ಲು ಅರ್ಜುನ್ ಅವರು ತಮ್ಮ ಸಂಪರ್ಕಕ್ಕೆ ಬಂದವರು ಕೊರೊನಾ ಟೆಸ್ಟ್ ಮಾಡಬೇಕೆಂದು ಮನವಿ ಮಾಡಿದ್ದಾರೆ. ಮತ್ತು ತಾನು ಆರೋಗ್ಯವಾಗಿರುವುದಾಗಿ, ತನ್ನ ಬಗ್ಗೆ ಚಿಂತಿಸಬಾರದೆಂದು ಅಭಿಮಾನಿಗಳಿಗೆ  ತಿಳಿಸಿದ್ದಾರೆ.

ಆದರೂ ನಟನ ಅಭಿಮಾನಿಗಳು ದೇವಸ್ಥಾನಕ್ಕೆ ತೆರಳಿ ನಟನ ಆರೋಗ್ಯ ಬಹಳ ಬೇಗನೆ ಚೇತರಿಸಿಕೊಳ್ಳುವಂತೆ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳಿನ ಖ್ಯಾತ ನಿರ್ದೇಶಕ ಕೆವಿ ಆನಂದ್ ಹೃದಯಾಘಾತದಿಂದ ನಿಧನ