Select Your Language

Notifications

webdunia
webdunia
webdunia
webdunia

ತಮಿಳು ಚಿತ್ರದಲ್ಲಿ ನಟಿಸೋ ಆಸೆ ಇದೆ ಪ್ರಶಾಂತ್

ತಮಿಳು ಚಿತ್ರದಲ್ಲಿ ನಟಿಸೋ ಆಸೆ ಇದೆ ಪ್ರಶಾಂತ್

ಗುರುಮೂರ್ತಿ

ಬೆಂಗಳೂರು , ಮಂಗಳವಾರ, 27 ಫೆಬ್ರವರಿ 2018 (13:35 IST)
ಒರಟ ಚಿತ್ರ ಎಂದ ಕೂಡಲೇ ನೆನಪಾಗೋದು ನಟ ಪ್ರಶಾಂತ್ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದ ಪ್ರಶಾಂತ್ ಇತ್ತೀಚಿನ ಹಲವು ಚಿತ್ರಗಳಲ್ಲಿ ನಟಿಸಿ ಎಲ್ಲಾ ಪಾತ್ರಗಳಿಗೂ ಸೈ ಎನಿಸಿಕೊಂಡಿರುವ ನಟ ಎಂದೇ ಹೇಳಬಹುದು.
ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ಚಂದನವನದಲ್ಲಿ ಹೆಸರು ಮಾಡಿರುವ ಪ್ರಶಾಂತ ಈಗಾಗಲೇ ಹಲವಾರು ಸಿನೆಮಾಗಳಲ್ಲಿ ನಾಯಕ ನಟರಾಗಿ ಮಿಂಚಿದ್ದು, ಡೈಲಾಗ್ ರೈಟಿಂಗ್, ಸ್ಕ್ರೀನ್ ಪ್ಲೇ ನಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ.
 
ಇಂದು ನಡೆದ ವೆಬ್‌ದುನಿಯಾ ಕನ್ನಡ ಆನ್‌ಲೈನ್ ಪೋರ್ಟಲ್‌ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಪ್ರಶಾಂತ್, ತಮ್ಮ ಚಿತ್ರರಂಗದ ಪ್ರವೇಶ ಹಾಗೂ ತಮ್ಮ ಸಿನೆಮಾಗಳ ಕುರಿತಾಗಿ ಮಾತನಾಡಿದರು. ಅಲ್ಲದೇ ಪ್ರಸ್ತುತವಾಗಿ ಯಾರಿಗೆ ಯಾರುಂಟು ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಅದರ ಎಡಿಟಿಂಗ್ ಕೆಲಸ ಬಾಕಿ ಇದೆ ಮತ್ತು ಈ ಚಿತ್ರ ಎಪ್ರಿಲ್‌ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎನ್ನುವ ಮಾತನ್ನು ಹೇಳಿದರು. ಅಷ್ಟೇ ಅಲ್ಲ ಈಗಾಗಲೇ ಕನ್ನಡವನ್ನು ಹೊರತುಪಡಿಸಿ ಇತರ ಭಾಷೆಗಳಲ್ಲೂ ಅವಕಾಶಗಳು ಬರುತ್ತಿರುವುದಾಗಿ ಹೇಳಿದ ಪ್ರಶಾಂತ್ ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೇನೆ ಒಂದು ವೇಳೆ ಅಂತಹ ಕಥೆ ಏನಾದರೂ ಸಿಕ್ಕಿದಲ್ಲಿ ನಟಿಸುವ ಆಸೆಯಿದೆ ಎಂದು ಹೇಳಿದ್ದಾರೆ.
 
ಈಗಾಗಲೇ ತಮಿಳು ಚಿತ್ರವೊಂದರ ಕಥೆಯನ್ನು ಕೇಳಿದ್ದು ಅದರ ಕುರಿತು ಮಾತುಕಥೆ ನಡೆದಿದೆ. ಒಂದು ವೇಳೆ ಅದು ಪೂರ್ಣಗೊಂಡಲ್ಲಿ ತಮಿಳಿನ ಸಿನೆಮಾದಲ್ಲಿ ಅಭಿನಯಿಸುವುದಾಗಿ ತಿಳಿಸಿದರು.
 
ಇತ್ತೀಚಿನ ದಿನಗಳಲ್ಲಿ ಎಲ್ಲಾ ಭಾಷೆಯಲ್ಲೂ ಕನ್ನಡ ನಟರು ನಟಿಸುತ್ತಿರುವುದು ಸ್ಯಾಂಡಲ್‌ವೂಡ್‌‌ನ ಹೆಮ್ಮೆ ಎಂದೇ ಹೇಳಬಹುದು. ಅದೇ ಸಾಲಿಗೆ ಪ್ರಶಾಂತ್ ಕೂಡಾ ಸೇರುತ್ತಿದ್ದಾರೆ ಎಂಬುದು ಗಮನಾರ್ಹ. ಒಟ್ಟಿನಲ್ಲಿ ಅವರ ಮುಂಬರುವ ಸಿನೆಮಾವನ್ನು ನಿರೀಕ್ಷಿಸುತ್ತಿರುವ ಅಭಿಮಾನಿಗಳಿಗೆ ಎಪ್ರಿಲ್‌ನಲ್ಲಿ ಬಿಡುಗಡೆಯಾಗಲಿರುವ ಅವರ ಸಿನೆಮಾ ಹೇಗಿರಬಹುದು ಎಂಬ ಕುತೂಹಲ ಕಾಡುತ್ತಿರುವುದಂತು ಸುಳ್ಳಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀದೇವಿಗೆ ಸಂಗೀತ ಗೌರವ ಸಲ್ಲಿಸಿದ ಜಾಕ್ವೆಲಿನ್ ಫರ್ನಾಂಡಿಸ್ - ವೈರಲ್ ವೀಡಿಯೋ