Select Your Language

Notifications

webdunia
webdunia
webdunia
webdunia

ಶ್ರೀದೇವಿಗೆ ಸಂಗೀತ ಗೌರವ ಸಲ್ಲಿಸಿದ ಜಾಕ್ವೆಲಿನ್ ಫರ್ನಾಂಡಿಸ್ - ವೈರಲ್ ವೀಡಿಯೋ

ಶ್ರೀದೇವಿಗೆ ಸಂಗೀತ ಗೌರವ ಸಲ್ಲಿಸಿದ ಜಾಕ್ವೆಲಿನ್ ಫರ್ನಾಂಡಿಸ್ - ವೈರಲ್ ವೀಡಿಯೋ

ಅತಿಥಾ

ಬೆಂಗಳೂರು , ಮಂಗಳವಾರ, 27 ಫೆಬ್ರವರಿ 2018 (13:25 IST)
ಬಾಲನಟಿಯಾಗಿ, 4ನೇ ವರ್ಷಕ್ಕೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ 54 ವರ್ಷದ ಈ ನಟಿ ದೂರದ ದುಬೈನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮೋಹಕ ತಾರೆ ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. ಬಾಲಿವುಡ್ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿಯ ಸಾವು ಇಡೀ ಚಿತ್ರರಂಗಕ್ಕೇ ಶಾಕ್ ಕೊಟ್ಟಿದೆ. 
ಜಾಕ್ವೆಲಿನ್ ಫೆರ್ನಾಂಡೀಸ್ ಅವರು ನಟಿ ಶ್ರೀದೇವಿಗೆ ಗೌರವವಾಗಿ ತಮ್ಮ ಕೀಬೋರ್ಡ್‌ನಲ್ಲಿ 'ಹಲ್ಲೆಲುಯಾ' ಎಂಬ ಹಾಡನ್ನು ನುಡಿಸಿದ ವೀಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 
 
ಜಾಕ್ವೆಲಿನ್ , "ಇಂದು ನಾನು ಬೆರಗಾಗಿದ್ದೇನೆ... ಜೀರ್ಣಿಸಿಕೊಳ್ಳಲಾಗದ ಹಲವು ವಿಷಯಗಳು ಇವೆ... ಅವರು ಬಹಳ ಶೀಘ್ರ ಹೋರಟಿ ಬಿಟ್ಟರು...ನಾನು ಅವರ ಅಭಿಮಾನಿಯಾಗಿದ್ದಳು, ಅವರು ಯಾವಾಗಲೂ ತುಂಬಾ ಹಿತಕರವಾಗಿ ಮಾತನಾಡುತ್ತಿದ್ದರು ಮತ್ತು ನನಗೆ ದಯೆ ತೋರಿಸುತ್ತಿದ್ದರು...ಅವರ ಸಾವು ನನಗೆ ಬಹಳಷ್ಟು ಪಾಠ ಕಲಿಸಿದೆ... ಜೀವನವು ತುಂಬಾ ಚಿಕ್ಕದು ಮತ್ತು ದುರ್ಬಲವಾಗಿದೆ, ಪ್ರತಿ ಕ್ಷಣವೂ ಎಣಿಕೆ ಮಾಡುತ್ತದೆ, ಇದು ಪೂರ್ವಾಭ್ಯಾಸವಲ್ಲ... ಅವರಂತೆ ಯಾರೂ ಇರಲಾರರು ... RIP #ಶ್ರೀದೇವಿ." ಎಂದು ಬರೆದಿದ್ದಾರೆ
 

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ತಲೆಗೆ ವೈನ್‍ಗ್ಲಾಸ್‍ ಹೊಡೆದುಕೊಂಡ ಪ್ರಿಯಾಂಕ ಚೋಪ್ರಾ - ವೈರಲ್ ವಿಡಿಯೋ