ಶ್ರೀದೇವಿ ನಿಗೂಢ ಸಾವು: ಬೋನಿ ಕಪೂರ್ ತೀವ್ರ ವಿಚಾರಣೆ ನಡೆಸಿದ ಪೊಲೀಸರು

ಮಂಗಳವಾರ, 27 ಫೆಬ್ರವರಿ 2018 (09:50 IST)
ದುಬೈ: ಬಾಲಿವುಡ್ ತಾರೆ ಶ್ರೀದೇವಿ ಸಾವಿನ ಸುತ್ತ ಹುಟ್ಟಿಕೊಂಡಿರುವ ಹಲವು ಅನುಮಾನಗಳಿಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ದುಬೈ ಪೊಲೀಸರು ಪತಿ ಬೋನಿ ಕಪೂರ್ ರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
 

ಅಷ್ಟೇ ಅಲ್ಲದೆ, ಶ್ರೀದೇವಿ ಸಾವಿಗೂ ಕೆಲವು ಗಂಟೆಗಳ ಮೊದಲು ಮಾತನಾಡಿರುವ ವ್ಯಕ್ತಿಗಳ ದೂರವಾಣಿ ಕರೆಗಳ ಬಗ್ಗೆಯೂ ತನಿಖೆ ನಡೆಸಿದ್ದಾರೆ.

ಶ್ರೀದೇವಿ ಸಾವಿನ ಸುದ್ದಿ ಶನಿವಾರ ಸಂಜೆ (ದುಬೈ ಕಾಲಮಾನ) 6.30 ರ ಸುಮಾರಿಗೇ ತಿಳಿದರೂ ಬೋನಿ ಪೊಲೀಸರಿಗೆ ಎರಡು ಗಂಟೆ ತಡವಾಗಿ ವಿಷಯ ತಿಳಿಸಿದ್ದೆಕೆ? ಶ್ರೀದೇವಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಿಲ್ಲವೇಕೆ? ತಡವಾಗಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದೇಕೆ ಎಂಬ ಅನುಮಾನಗಳು ಪೊಲೀಸರಿಗೆ ಹುಟ್ಟಿಕೊಂಡಿದ್ದು ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಧಿಕಾರಿಗಳು ಒಪ್ಪಿದರೆ ಇಂದೇ ಶ್ರೀದೇವಿ ಮೃತದೇಹ ಭಾರತಕ್ಕೆ