Publish Date: Tue, 27 Feb 2018 (08:56 IST)
Updated Date: Tue, 27 Feb 2018 (08:59 IST)
ನವದೆಹಲಿ: ದುಬೈನಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ ಬಾಲಿವುಡ್ ನಟಿ ಶ್ರೀದೇವಿ ಮೃತದೇಹ ಮರಣೋತ್ತರ ಪರೀಕ್ಷೆ ಮುಗಿದಿದ್ದು ಇತರ ಔಪಚಾರಿಕ ಪ್ರಕ್ರಿಯೆಗಳು ಮುಗಿದರೆ ಇಂದೇ ಭಾರತಕ್ಕೆ ಆಗಮಿಸಲಿದೆ.
ನಿನ್ನೆ ತವರಿಗೆ ಶ್ರೀದೇವಿ ಮೃತದೇಹ ಬರುತ್ತದೆಂಬ ಸುದ್ದಿಗಳಿತ್ತಾದರೂ ಸಾವಿನ ಕುರಿತಾದ ಕಾರಣಗಳ ವಿಚಾರಣೆ, ಇತರ ಪ್ರಯೋಗಾಲಯ ಪರೀಕ್ಷೆ ಹಿನ್ನಲೆಯಲ್ಲಿ ಆಗಮನವಾಗಿರಲಿಲ್ಲ.
ಈಗಾಗಲೇ ಶ್ರೀದೇವಿ ಮೃತದೇಹ ಕರೆತರಲು 17 ಸೀಟ್ ಗಳ ಉದ್ಯಮಿ ಅನಿಲ್ ಅಂಬಾನಿ ಅವರ ಖಾಸಗಿ ಜೆಟ್ ವಿಮಾನ ದುಬೈ ತಲುಪಿದೆ. ದುಬೈ ಪೊಲೀಸರ ವಿಚಾರಣೆ ಪೂರ್ಣಗೊಂಡು ಅನುಮತಿ ದೊರಕಿದರೆ ಇಂದೇ ಶ್ರೀದೇವಿ ಮೃತದೇಹ ಭಾರತಕ್ಕೆ ಮರಳಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ