ಕನ್ನಡ ಸಿನಿಮಾದೊಂದಿಗಿತ್ತು ನಟಿ ಶ್ರೀದೇವಿಗೆ ನಂಟು

ಭಾನುವಾರ, 25 ಫೆಬ್ರವರಿ 2018 (07:00 IST)
ದುಬೈ:ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ ಶ್ರೀದೇವಿ ಹವಾ ಹವಾಯಿ ನಟಿ ಎಂದೇ ಖ್ಯಾತರಾಗಿದ್ದವರು. ಬಂಧುವೊಬ್ಬರ ಮದುವೆ ಸಮಾರಂಭಕ್ಕೆ ಪತಿ, ಮಗಳೊಂದಿಗೆ ದುಬೈಗೆ ತೆರಳಿದ್ದಾಗ ನಟಿ ಅಲ್ಲಿಯೇ ತೀವ್ರ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ನಟಿ ಶ್ರೀದೇವಿಗೂ ಕನ್ನಡ ಸಿನಿಮಾರಂಗಕ್ಕೂ ನಂಟಿದೆ.


ಬಾಲನಟಿಯಾಗಿ 1975ರಲ್ಲಿ ಜೂಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಈ ನಟಿ, ಕನ್ನಡದ 6 ಚಿತ್ರಗಳಲ್ಲಿ ನಟಿಸಿದ್ದಾರೆ. 'ಭಕ್ತಕುಂಬಾರ', ‘ಬಾಲ ಭಾರತ’,  ‘ಸಂಪೂರ್ಣ ರಾಮಾಯಣ’, ‘ಪ್ರಿಯಾ’,  'ಹೆಣ್ಣು ಸಂಸಾರದ ಕಣ್ಣು'  ‘ಯಶೋಧ ಕೃಷ್ಣ’ ಚಿತ್ರದಲ್ಲಿಯೂ ನಟಿಸಿದ್ದಾರೆ. ಡಾ. ರಾಜ್ ಕುಮಾರ್ ಜತೆ ಕೂಡ ನಟಿಸಿದ್ದಾರೆ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಾಲಿವುಡ್ ನ ಮೋಹಕ ತಾರೆ ಶ್ರೀದೇವಿ ಇನ್ನಿಲ್ಲ!