ನಟಿ ಪ್ರಿಯಾಂಕಾ ಚೋಪ್ರಾ ಅವರು ವೈನ್ ಗ್ಲಾಸ್ ನಿಂದ ತಲೆಗೆ ಬಡಿದುಕೊಂಡಿದ್ದು ಯಾಕೆ ಗೊತ್ತಾ?

ಭಾನುವಾರ, 25 ಫೆಬ್ರವರಿ 2018 (06:15 IST)
ಮುಂಬೈ : ಬಾಲಿವುಡ್ ನಿಂದ ಹಾಲಿವುಡ್ ಗೆ ತೆರಳಿದ ನಟಿ ಪ್ರಿಯಾಂಕಾ ಚೋಪ್ರಾ ಅವರು ಕೆಲಸದ ಒತ್ತಡ ತಾಳಲಾರದೆ ಹತಾಶೆಯಿಂದ ವೈನ್ ಕುಡಿದು ಆ ಗ್ಲಾಸ್ ಅನ್ನು ತಲೆಗೆ ಬಡಿದುಕೊಂಡಿದ್ದಾರೆ.


ದಿನವಿಡೀ ಬಿಡುವಿಲ್ಲದ ಶೂಟಿಂಗ್ ನಿಂದ ಸುಸ್ತಾಗಿದ್ದರಿಂದ ಅವರು ಈ ರೀತಿಯಾಗಿ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ. ಅವರ ಈ ವರ್ತನೆಯನ್ನು ಕಂಡು ಶಾಕ್ ಆದ ಅವರ ಅಭಿಮಾನಿಗಳು ಬ್ರೇಕ್ ತೆಗೆದುಕೋ. ಅಥವಾ ಬಾಲಿವುಡ್ ಗೆ ವಾಪಸ್ಸಾಗೆಂದು ಸಲಹೆ ಕೊಟ್ಟಿದ್ದಾರೆ. ಕ್ವಾಂಟಿಕೋ3' ಟಿವಿ ಸಿರೀಸ್ ಶೂಟಿಂಗ್ ಗಾಗಿ ಲಾಸ್ ಏಂಜಲೀಸ್ ಮತ್ತು ನ್ಯೂಯಾರ್ಕ್ ನಲ್ಲಿ ಓಡಾಡುತ್ತಿರುವ ಪ್ರಿಯಾಂಕಾ ಅವರು ಕೆಲಸದ ಒತ್ತಡ ತಾಳಲಾರದೇ ನಾನು ಹತಾಶೆಯಿಂದ ಹೀಗೆ ಮಾಡುತ್ತಿದ್ದೇನೆ. ನೀವು ಯಾರೂ ಇದನ್ನು ಅನುಕರಿಸಬೇಡಿ ಎಂದು ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾರು ಅಪಘಾತ; ಚಾಲಕನ ಮೇಲೆ ಹರಿಹಾಯ್ದ ದೀಪಿಕಾ ಪಡುಕೋಣೆ