ರಾಕೇಶ್ ಅಡಿಗ ಮಾಡಿದ ಪ್ರ್ಯಾಂಕ್ ಗೆ ಪ್ರಶಾಂತ್ ಸಂಬರ್ಗಿ ಸಿಟ್ಟು, ಕಣ್ಣೀರು

Webdunia
ಭಾನುವಾರ, 2 ಅಕ್ಟೋಬರ್ 2022 (10:20 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ರಾಕೇಶ್ ಅಡಿಗ ಮಾಡಿದ ಪ್ರ್ಯಾಂಕ್ ಗೆ ಸಿಟ್ಟು ಮಾಡಿಕೊಂಡು ಕೊನೆಗೆ ಕಣ್ಣೀರು ಹಾಕಿದ ಘಟನೆ ನಡೆದಿದೆ.

ಅನುಪಮಾ ಗೌಡ ಮತ್ತು ರಾಕೇಶ್ ಅಡಿಗ ಮನೆಯವರನ್ನು ಪ್ರ್ಯಾಂಕ್ ಮಾಡಲು ಐಡಿಯಾ ಮಾಡಿದ್ದರು. ಅದರಂತೆ ರಾಕೇಶ್ ಬಾಯಿಗೆ ಪೇಸ್ಟ್ ನೊರೆ ಹಾಕಿಕೊಂಡು ಫಿಟ್ಸ್ ಬಂದವರ ರೀತಿಯಲ್ಲಿ ಗಾರ್ಡನ್ ಏರಿಯಾದಲ್ಲಿ ಬಿದ್ದರು. ಇದನ್ನು ನೋಡಿ ಅಮೂಲ್ಯ ಗೌಡ ಮನೆಯವರೆಲ್ಲರನ್ನೂ ಕರೆದರು.

ರಾಕೇಶ್ ನನ್ನು ನೋಡಿ ಪ್ರಶಾಂತ್ ನಿಜವಾಗಿಯೂ ಆತನಿಗೆ ಫಿಟ್ಸ್ ಬಂದಿದೆ ಎಂದುಕೊಂಡು ಗಾಬರಿಯಾದರು. ಆದರೆ ಇದೆಲ್ಲಾ ಪ್ರ್ಯಾಂಕ್ ಎಂದು ರಾಕೇಶ್ ನಗುತ್ತಿದ್ದಂತೇ ಸಿಟ್ಟಿಗೆದ್ದ ಪ್ರಶಾಂತ್ ನೇರವಾಗಿ ರಾಕೇಶ್ ಕಾಲರ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ನೀವು ಈ ರೋಗ ಇರುವವರಿಗೆ ಅವಮಾನ ಮಾಡಿದ್ದೀರಾ ಎಂದು ಕೋಪದಿಂದಲೇ ಹೇಳಿದರು. ನನಗೂ ಇದೇ ಸಮಸ್ಯೆಯಿರುವ ಮಗ ಇದ್ದಾನೆ. ಅವನು ಈಗ ಚಿಕಿತ್ಸೆ ಪಡೆದು ಗುಣಮುಖನಾಗಿದ್ದಾನೆ. ನಿನ್ನನ್ನು ನೋಡಿದಾಗ ನನಗೆ ಅವನೇ ನೆನಪಾದ ಎಂದು ಕಣ್ಣೀರು ಹಾಕಿದರು. ಇದನ್ನು ನೋಡಿ ರಾಕೇಶ್ ಮತ್ತು ಅನುಪಮಾ ತಮ್ಮ ಪ್ರ್ಯಾಂಕ್ ಗೆ ಕ್ಷಮೆ ಯಾಚಿಸಿದರು.
-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

ಈ ರೀತಿ ನಡೆದುಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ವ: ಪಾಪರಾಜಿಗಳ ಮೇಲೆ ಸನ್ನಿ ಡಿಯೋಲ್ ಗರಂ

ಲೇಡಿ ಸೂಪರ್ ಸ್ಟಾರ್‌ ನಯನಾತಾರ ದಂಪತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ

ಎಲ್ಲರೆದುರೇ ರಶ್ಮಿಕಾ ಮಂದಣ್ಣಗೆ ಮುತ್ತಿಕ್ಕಿದ ವಿಜಯ್ ದೇವರಕೊಂಡ video

ಆಸ್ಪತ್ರೆಯಿಂದ ಹೊರಬರುತ್ತಿದ್ದ ಹಾಗೇ ಯೋಗ ಬೆಸ್ಟ್ ಎಂದ ನಟ ಗೋವಿಂದ

ಮುಂದಿನ ಸುದ್ದಿ
Show comments