ಬೆಂಗಳೂರು: ಮೂಲತಃ ಕನ್ನಡದವರಾದರೂ ಪ್ಯಾನ್ ಇಂಡಿಯಾ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಪ್ರಶಾಂತ್ ನೀಲ್ ಈಗ ಕನ್ನಡವನ್ನೇ ಮರೆತರಾ?
									
			
			 
 			
 
 			
			                     
							
							
			        							
								
																	ಕೆಜಿಎಫ್ ಬಳಿಕ ಪ್ರಶಾಂತ್ ನೀಲ್ ಯಾವುದೇ ಕನ್ನಡ ಸಿನಿಮಾ ಮಾಡುತ್ತಿಲ್ಲ.  ಸಾಲದ್ದಕ್ಕೆ ಹೆಚ್ಚಾಗಿ ತೆಲುಗು ನಟರೊಂದಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಕಮಲ್ ಹಾಸನ್ ಅವರ ವಿಕ್ರಂ ಸಿನಿಮಾವನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಇದು ಕನ್ನಡ ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ.
									
										
								
																	ಇತ್ತೀಚೆಗೆ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಇದು ಬಹುಭಾಷೆಗಳಲ್ಲೂ ಮೆಚ್ಚುಗೆ ಪಡೆದಿತ್ತು. ಆದರೆ ಈ ಬಗ್ಗೆ ಪ್ರಶಾಂತ್ ನೀಲ್ ಒಂದೇ ಒಂದು ಮಾತನಾಡಿಲ್ಲ. ಹೀಗಾಗಿ ನೆಟ್ಟಿಗರು ಪ್ರಶಾಂತ್ ನೀಲ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.