Publish Date: Thu, 02 Jun 2022 (10:10 IST)
Updated Date: Thu, 02 Jun 2022 (10:12 IST)
ಬೆಂಗಳೂರು: ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಸದ್ಯದಲ್ಲೇ ತಾಯಿಯಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ.
ಕೆಲವು ದಿನಗಳ ಹಿಂದೆ ತಮ್ಮ ಪತಿ ಜೊತೆಗೆ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಇದೀಗ ಮತ್ತೆ ಅವರು ಕೊಂಚ ವಿಭಿನ್ನವಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಈ ಬಾರಿ ಬಾತ್ ಟಬ್ ನಲ್ಲಿ ಬೇಬಿ ಬಂಪ್ ಕಾಣುವಂತೆ ಫೋಟೋ ಶೂಟ್ ಮಾಡಿಸಿದ್ದಾರೆ. ಈ ವ್ಯತ್ಯಸ್ಥ ಭಂಗಿಯ ಫೋಟೋ ಶೂಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ.