Publish Date: Tue, 08 Dec 2020 (09:24 IST)
Updated Date: Tue, 08 Dec 2020 (09:27 IST)
ಬೆಂಗಳೂರು: ಮೇಘನಾ ರಾಜ್ ತಾಯಿ, ಹಿರಿಯ ನಟಿ ಪ್ರಮೀಳಾ ಜೋಷಾಯ್ ಕೊರೋನಾ ಕಾರಣದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೊರೋನಾದಿಂದ ಬಳಲುತ್ತಿರುವ ಪ್ರಮೀಳಾ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯಕ್ಕೆ ಮೇಘನಾ ಹಾಗೂ ಅವರ ನವಜಾತ ಪುತ್ರನೂ ಅವರ ಮನೆಯಲ್ಲೇ ಇದ್ದಾರೆ. ಆದರೂ ಅವರಿಗೆ ಯಾವುದೇ ಅಪಾಯವಾಗಿಲ್ಲ ಎನ್ನಲಾಗಿದೆ.