ನವದೆಹಲಿ: ನಮ್ಮ ದೇಶಕ್ಕೆ ಕೊರೋನಾ ವ್ಯಾಕ್ಸಿನ್ ನ ಅಗತ್ಯ ಪ್ರಶ್ನಿಸಿದ್ದಕ್ಕೆ ಕ್ರಿಕೆಟ್ ಹರ್ಭಜನ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾ ಮುಗ್ಗಾ ಟ್ರೋಲ್ ಗೊಳಗಾಗಿದ್ದಾರೆ.
ವಿವಿಧ ದೇಶಗಳಲ್ಲಿ ವ್ಯಾಕ್ಸಿನ್ ಬಳಿಕ ಕೊರೋನಾ ಪ್ರಕರಣ ಇಳಿಕೆ ಪ್ರಮಾಣದ ಅಂಕಿ ಅಂಶ ಪ್ರಕಟಿಸಿದ ಭಜಿ, ಭಾರತದಲ್ಲಿ ವ್ಯಾಕ್ಸಿನ್ ಇಲ್ಲದೆಯೇ 94% ಇಳಿಕೆಯಾಗಿದೆ. ಹಾಗಿದ್ದ ಮೇಲೆ ಭಾರತಕ್ಕೆ ವ್ಯಾಕ್ಸಿನ್ ನ ಅಗತ್ಯವೇನು ಎಂದು ಪ್ರಶ್ನಿಸಿದ್ದಾರೆ. ಭಜಿ ಹೀಗೆ ಪ್ರಶ್ನಿಸಿದ್ದಕ್ಕೆ ಕೆಲವರು ಮೊದಲು ನಿಮ್ಮ ವ್ಯಾಟ್ಸಪ್ ಡಿಲೀಟ್ ಮಾಡಿ ಎಂದಿದ್ದಾರೆ. ಇಂತಹ ಸ್ಟುಪಿಡ್ ಟ್ವೀಟ್ ಮಾಡಬೇಡಿ ಎಂದು ಮತ್ತೆ ಕೆಲವರು ಬೈದಿದ್ದಾರೆ.