Select Your Language

Notifications

webdunia
webdunia
webdunia
webdunia

ಪತ್ನಿ ಜತೆಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ರೊಮ್ಯಾಂಟಿಕ್ ಆಗಿರುವ ಫೋಟೋ ಪ್ರಕಟಿಸಿದ ಪ್ರಕಾಶ್ ರಾಜ್ ಕಾಲೆಳೆದ ಅಭಿಮಾನಿಗಳು

ಪತ್ನಿ ಜತೆಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ರೊಮ್ಯಾಂಟಿಕ್ ಆಗಿರುವ ಫೋಟೋ ಪ್ರಕಟಿಸಿದ ಪ್ರಕಾಶ್ ರಾಜ್ ಕಾಲೆಳೆದ ಅಭಿಮಾನಿಗಳು
ಬೆಂಗಳೂರು , ಬುಧವಾರ, 18 ಏಪ್ರಿಲ್ 2018 (08:10 IST)
ಬೆಂಗಳೂರು: ಇತ್ತೀಚೆಗೆ ಬಹುಭಾಷಾ ತಾರೆ ಪ್ರಕಾಶ್ ರಾಜ್ ರಾಜಕೀಯ ಕಾರಣಗಳಿಂದಲೇ ಸುದ್ದಿಯಾಗುತ್ತಿದ್ದರು. ಆದರೆ ಇದೀಗ ಖಾಸಗಿ ವಿಚಾರವೊಂದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.

ಪತ್ನಿ ಪೋನಿ ವರ್ಮಾ ಜತೆಗೆ ಪ್ರಕಾಶ್ ರೈ ಸ್ವಿಮ್ಮಿಂಗ್ ಪೂಲ್ ನಲ್ಲಿ ಬೋಲ್ಡ್ ಆಗಿರುವ ಫೋಟೋ ಪ್ರಕಟಿಸಿದ್ದರು. ಇದಕ್ಕೆ ಹಲವರು ಪ್ರಕಾಶ್ ರೈ ಅವರನ್ನು ಲೇವಡಿ ಮಾಡಿದ್ದಾರೆ.

webdunia
‘ನಿಮ್ಮ ಜತೆಗಿರುವುದು ಪತ್ನಿಯೋ ಮಗಳೋ’ ಎಂದು ಕೆಲವರು ಕಿಚಾಯಿಸಿದರೆ ಇನ್ನು ಕೆಲವರು ಈ ಇಳಿ ವಯಸ್ಸಿನಲ್ಲೂ ಸ್ವಿಮ್ಮಿಂಗ್ ಪೂಲ್ ನಲ್ಲಿ ಮಜಾ ಮಾಡುವ ಖಯಾಲಿ ಎಂದು ಕೆಲವರು ತಮಾಷೆ ಮಾಡಿದ್ದಾರೆ.

ಬೇಸಿಗೆಯ ಬೇಗೆ ಕಳೆಯಲು ಪತ್ನಿ ಮಾತ್ರವಲ್ಲ, ಪುತ್ರನನ್ನೂ ಪ್ರಕಾಶ್ ರೈ ಸ್ವಿಮ್ಮಿಂಗ್ ಪೂಲ್ ಗೆ ಇಳಿಸಿದ್ದರು. ಹಾಗಿದ್ದರೂ ಅಭಿಮಾನಿಗಳ ಚಾಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೆಲವರು ಪ್ರಕಾಶ್ ರೈ ಜಾಲಿ ಮೂಡ್ ನೋಡಿ ಅಭಿನಂದಿಸಿದವರೂ ಇದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

‘ಫೆನ್ನೆ ಖಾನ್’ ಚಿತ್ರದಿಂದ ಐಶ್ವರ್ಯಾ ರೈಗೆ ಸಂಕಷ್ಟ ಎದುರಾಗಿದ್ದು ಯಾಕೆ?