Publish Date: Thu, 28 Jan 2021 (10:50 IST)
Updated Date: Thu, 28 Jan 2021 (10:52 IST)
ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿರುವ ಸಲಾರ್ ಸಿನಿಮಾ ನಾಳೆಯಿಂದ ಶೂಟಿಂಗ್ ಆರಂಭಿಸಲಿದೆ. ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಪ್ರಭಾಸ್ ನಾಯಕರಾಗಿರುವ ಈ ಸಿನಿಮಾ ಬಹುಭಾಷೆಗಳಲ್ಲಿ ತಯಾರಾಗಲಿದೆ.
ಇತ್ತೀಚೆಗೆ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ಮುಹೂರ್ತ ಸಮಾರಂಭ ನೆರವೇರಿತ್ತು. ಈ ಕಾರ್ಯಕ್ರಮದಲ್ಲಿ ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್ ಅತಿಥಿಯಾಗಿದ್ದರು. ಕೆಜಿಎಫ್ ಬಳಿಕ ಪ್ರಶಾಂತ್ ನಿರ್ದೇಶನ ಮಾಡುತ್ತಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಸಲಾರ್. ಇದೂ ಕೂಡಾ ತೆಲುಗು, ಕನ್ನಡ, ತಮಿಳು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತೆಲಂಗಾಣದಲ್ಲಿ ಪ್ರಭಾಸ್ ಎಂಟ್ರಿ ದೃಶ್ಯದ ಚಿತ್ರೀಕರಣ ಮತ್ತು ಆಕ್ಷನ್ ದೃಶ್ಯಗಳು ಕೆಲವು ದಿನಗಳ ಕಾಲ ಮೊದಲ ಹಂತದಲ್ಲಿ ಚಿತ್ರೀಕರಣವಾಗಲಿದೆ.