Publish Date: Sat, 16 Jan 2021 (08:56 IST)
Updated Date: Sat, 16 Jan 2021 (09:00 IST)
ಹೈದರಾಬಾದ್: ರೆಬಲ್ ಸ್ಟಾರ್ ಪ್ರಭಾಸ್ ನಾಯಕರಾಗಿ ಅಭಿನಯಿಸುತ್ತಿರುವ ಕನ್ನಡದ ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಸಿನಿಮಾ ಮುಹೂರ್ತ ಕಾರ್ಯಕ್ರಮದಲ್ಲಿ ಕರ್ನಾಟಕ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ್ ಪಾಲ್ಗೊಂಡಿದ್ದಾರೆ.
ಮೊನ್ನೆಯಷ್ಟೇ ನಟ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಅಶ್ವತ್ಥ್ ನಾರಾಯಣ್ ತಮಿಳುನಾಡಿನ ದೇವಾಲಯ ಭೇಟಿಗೆ ಸಾಥ್ ನೀಡಿದ್ದರು. ಇದೀಗ ಯಶ್ ಜೊತೆಗೆ ಅಶ್ವತ್ಥ್ ನಾರಾಯಣ್ ಕೂಡಾ ಸಲಾರ್ ಸಿನಿಮಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.