Daily Horoscope
✕

ಸಲಾರ್ ಮೂಲಕ ದಾಖಲೆ ಮಾಡಲಿದ್ದಾರೆ ಪ್ರಭಾಸ್

Webdunia
ಗುರುವಾರ, 21 ಡಿಸೆಂಬರ್ 2023 (09:30 IST)
ಹೈದರಾಬಾದ್: ಹೊಂಬಾಳೆ ಫಿಲಂಸ್ ನಿರ್ಮಿಸಿರುವ ಪ್ರಭಾಸ್ ನಾಯಕರಾಗಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ನಾಳೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.

ಬಾಲಿವುಡ್ ನ ಡಂಕಿ ಸಿನಿಮಾವೂ ಇದೇ ದಿನ ಬಿಡುಗಡೆಯಾಗುತ್ತಿದೆ. ಹೀಗಾಗಿ ಅಡ್ವಾನ್ಸ್ ಬುಕಿಂಗ್ ವಿಚಾರದಲ್ಲಿ ಸಲಾರ್ ಮತ್ತು ಡಂಕಿ ನಡುವೆ ತೀವ್ರ ಪೈಪೋಟಿಯಿದೆ.

ಹಾಗಿದ್ದರೂ ಸದ್ಯದ ಮಟ್ಟಿಗೆ ನೋಡುವುದಾದರೆ ದಕ್ಷಿಣ ಭಾರತದಲ್ಲಿ ಸಲಾರ್ ಹವಾ ಜೋರಾಗಿಯೇ ಇದೆ. ಅಡ್ವಾನ್ಸ್ ಬುಕಿಂಗ್ ನಲ್ಲೂ ಸಲಾರ್ ಮುಂದಿದೆ. ಹೀಗಾಗಿ ಮೊದಲ ದಿನದ ಗಳಿಕೆಯಲ್ಲಿ ಸಲಾರ್ 100 ಕೋಟಿ ಗಳಿಕೆ ದಾಟಬಹುದು ಎಂಬ ನಿರೀಕ್ಷೆಯಿದೆ.

ಒಂದು ವೇಳೆ ಸಲಾರ್ ಸಿನಿಮಾ ಮೊದಲ ದಿನವೇ 100 ಕೋಟಿ ರೂ. ಬಾಚಿಕೊಂಡರೆ ಪ್ರಭಾಸ್ ದಾಖಲೆ ಮಾಡಲಿದ್ದಾರೆ. ಒಂದೇ ವರ್ಷ ಅವರ ಎರಡು ಸಿನಿಮಾಗಳು ಮೊದಲ ದಿನವೇ 100 ಕೋಟಿ ರೂ. ಗಳಿಕೆ ದಾಟಿದ ದಾಖಲೆ ಮಾಡಲಿದೆ. ಇದಕ್ಕೆ ಮೊದಲು ಇದೇ ವರ್ಷ ಪ್ರಭಾಸ್ ನಾಯಕರಾಗಿದ್ದ ಆದಿಪುರುಷ್ ಸಿನಿಮಾ ಮೊದಲ ದಿನ 100 ಕೋಟಿ ಗಳಿಕೆ ಮಾಡಿತ್ತು. ಇದೀಗ ಮತ್ತೊಮ್ಮೆ ಅದೇ ದಾಖಲೆ ಮಾಡಿದಂತಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಇಂಗ್ಲಿಷ್ ಮಾತನಾಡಿದ್ರೂ ಬಿಗ್ ಬಾಸ್ ಸುಮ್ಮನಿರೋದು ಯಾಕೆ

ಮೋದಿ ಹೊಗಳಿದ್ದಕ್ಕೇ… ಅನಂತನಾಗ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಇಂಥಾ ಮಾತುಗಳೇ..

ಡಯಟ್ ನೆಪ ಹೇಳಿ ಗಣೇಶನ ಪ್ರಸಾದ ನಿರಾಕರಿಸಿದ ರಣಬೀರ್ ಕಪೂರ್: ಬೀಫ್ ಕೊಟ್ಟಿದ್ರೆ… ನೆಟ್ಟಿಗರ ಟ್ರೋಲ್ Video

ಕನ್ನಡದ ನಟನಾ ದಿಗ್ಗಜ ಅನಂತ್ ನಾಗ್‌ಗೆ ‘ದಾದಾಸಾಹೇಬ್ ಫಾಲ್ಕೆ’ ಗೌರವ: ಪ್ರಧಾನಿ ಮೋದಿ ಶ್ಲಾಘನೆ

ಅಣ್ಣಾ ಹಾಗಲ್ಲ, ಹೀಗೆ ಮಾಡೋ…ಗಣೇಶನ ಪೂಜೆ ಮಾಡುವಾಗ ಎಡವಟ್ಟು ಮಾಡಿದ ಸಲ್ಮಾನ್ ಖಾನ್ ನೋಡಿ ತಂಗಿ ಮಾಡಿದ್ದೇನು ನೋಡಿ Video

ಮುಂದಿನ ಸುದ್ದಿ
Show comments