Publish Date: Sat, 16 Jul 2022 (08:40 IST)
Updated Date: Sat, 16 Jul 2022 (09:06 IST)
ಹೈದರಾಬಾದ್: ಪ್ರಶಾಂತ್ ನೀಲ್ ಜೊತೆಗೆ ಜೂ.ಎನ್ ಟಿಆರ್ ಮಾಡಲಿರುವ ಪ್ಯಾನ್ ಇಂಡಿಯಾ ಸಿನಿಮಾ ತಡವಾಗಲು ಪ್ರಭಾಸ್ ಕಾರಣರಾಗುತ್ತಿದ್ದಾರಂತೆ. ಹೀಗೆಂದು ಸುದ್ದಿಯೊಂದು ಹರಿದಾಡುತ್ತಿದೆ.
ಪ್ರಶಾಂತ್ ನೀಲ್ ಜೊತೆಗೆ ಪ್ರಬಾಸ್ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಮೊದಲ ಭಾಗದ ಚಿತ್ರೀಕರಣ ಮುಗಿದ ಬಳಿಕ ಜೂ.ಎನ್ ಟಿಆರ್ ಜೊತೆಗಿನ ಸಿನಿಮಾ ಮುಗಿಸಿ ಮತ್ತೆ ಸಲಾರ್ ಎರಡನೇ ಭಾಗದ ಚಿತ್ರೀಕರಣ ನಡೆಸಲು ಪ್ರಶಾಂತ್ ನೀಲ್ ಪ್ಲ್ಯಾನ್ ಮಾಡಿದ್ದರು.
ಆದರೆ ಈಗ ಪ್ರಭಾಸ್ ಎರಡೂ ಭಾಗಗಳ ಚಿತ್ರೀಕರಣ ನಡೆಸಿದ ಮೇಲೆಯೇ ಜೂ.ಎನ್ ಟಿಆರ್ ಸಿನಿಮಾ ಚಿತ್ರೀಕರಣ ಆರಂಭಿಸುವಂತೆ ಸೂಚನೆ ನೀಡಿದ್ದಾರಂತೆ. ಇದೇ ಕಾರಣಕ್ಕೆ ಜೂ.ಎನ್ ಟಿಆರ್ ಸಿನಿಮಾ ತಡವಾಗುವುದಕ್ಕೆ ಪ್ರಭಾಸ್ ಕಾರಣರಾಗುತ್ತಿದ್ದಾರೆ ಎನ್ನಲಾಗಿದೆ.