Publish Date: Wed, 06 Jul 2022 (09:10 IST)
Updated Date: Wed, 06 Jul 2022 (09:23 IST)
ಹೈದರಾಬಾದ್: ಜೂ.ಎನ್ ಟಿಆರ್ ಅವರ ಅಪ್ಪಟ ಅಭಿಮಾನಿ ಜನಾರ್ಧನ್ ಎಂಬವರು ಇತ್ತೀಚೆಗೆ ರಸ್ತೆ ಅಪಘಾತಕ್ಕೀಡಾಗಿದ್ದರು. ಇವರಿಗೆ ಖುದ್ದು ತಾರಕ್ ಕರೆ ಮಾಡಿ ಧೈರ್ಯ ಹೇಳಿದ್ದರು.
ಅಭಿಮಾನಿಯ ಚಿಕಿತ್ಸೆಗೆ ನೆರವಾಗಿದ್ದ ಜೂ.ಎನ್ ಟಿಆರ್ ಗುಣಮುಖರಾದ ಬಳಿಕ ಭೇಟಿ ಮಾಡುವುದಾಗಿ ಫೋನ್ ಮೂಲಕ ಭರವಸೆ ನೀಡಿದ್ದರು.
ಆದರೆ ಯಾರ ಪ್ರಾರ್ಥನೆಯೂ ಫಲಿಸಲಿಲ್ಲ. ಜನಾರ್ಧನ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಆತನ ಸಾವು ಜೂ.ಎನ್ ಟಿಆರ್ ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ.