Publish Date: Sun, 13 Mar 2022 (09:30 IST)
Updated Date: Sun, 13 Mar 2022 (09:34 IST)
ಹೈದರಾಬಾದ್: ರಾಧೇ ಶ್ಯಾಮ್ ರಿಲೀಸ್ ಆದ ಖುಷಿಯಲ್ಲಿರುವ ಪ್ರಭಾಸ್ ಬಾಹುಬಲಿ ಪಾರ್ಟ್ 3 ಸಿನಿಮಾ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಬಾಹುಬಲಿ ಎನ್ನುವ ಸಿನಿಮಾ ಪ್ರಭಾಸ್ ರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿತು. ಈ ಸಿನಿಮಾ ಪ್ರಭಾಸ್ ಪಾಲಿಗೆ ಯಾವತ್ತೂ ವಿಶೇಷವೇ.
ಬಾಹುಬಲಿ 1, ಬಾಹುಬಲಿ 2 ಸಿನಿಮಾ ಎರಡೂ ಯಶಸ್ಸಿನ ಉತ್ತುಂಗಕ್ಕೇರಿತ್ತು. ಹಾಗಿದ್ದರೆ ಬಾಹುಬಲಿ 3 ಸಿನಿಮಾ ಮಾಡುವ ಯೋಜನೆಯೇದಾರೂ ಇದೆಯೇ? ಒಂದು ವೇಳೆ ಇದ್ದರೆ ನಿಮಗೆ ಅಭಿನಯಿಸುವ ಆಸಕ್ತಿಯಿದೆಯೇ ಎಂದು ಸಂದರ್ಶನವೊಂದರಲ್ಲಿ ಪ್ರಭಾಸ್ ಕೇಳಿದಾಗ ಅವರು ಸಕಾರಾತ್ಮಕಕವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಸೂಪರ್ ಮ್ಯಾನ್ ಕತೆಗಳನ್ನು ಕೇಳುತ್ತಾ ಬೆಳೆದವರು ನಾವು. ಇಂತಹ ಸಿನಿಮಾಗಳನ್ನು ಮಾಡುವುದನ್ನು ಎಂಜಾಯ್ ಮಾಡುತ್ತೇನೆ. ಆದರೆ ಸದ್ಯಕ್ಕೆ ಸಣ್ಣ ಕತೆಗಳ, ಜನಕ್ಕೆ ಮನರಂಜನೆ ಕೊಡುವ ಸಿನಿಮಾಗಳನ್ನು ಮಾಡುವುದೇ ನನ್ನ ಗುರಿ ಎಂದಿದ್ದಾರೆ.
Krishnaveni K
Publish Date: Sun, 13 Mar 2022 (09:30 IST)
Updated Date: Sun, 13 Mar 2022 (09:34 IST)