ಬೆಂಗಳೂರು: ಬಹಳ ಸಮಯದಿಂದ ದೂರ ದೂರವೇ ಇರುವ ಕಿಚ್ಚ ಸುದೀಪ್-ದರ್ಶನ್ ಪುನೀತ್ ರಾಜ್ ಕುಮಾರ್ ನೆಪದಲ್ಲಿ ಒಂದಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಪುನೀತ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಚಿತ್ರದ ಹಾಡು ಸುದೀಪ್ ಕೈಯಲ್ಲಿ ಲಾಂಚ್ ಆಗಿದೆ. ಇನ್ನು, ಜೇಮ್ಸ್ ಪ್ರಿ ರಿಲೀಸ್ ಈವೆಂಟ್ ಅದ್ಧೂರಿಯಾಗಿ ನಡೆಯಲಿದ್ದು, ಅದಕ್ಕೆ ಚಿತ್ರರಂಗದ ಘಟಾನುಘಟಿಗಳು ಆಗಮಿಸಲಿದ್ದಾರೆ ಎಂಬ ಸುದ್ದಿಯಿದೆ.
ಈ ಕಾರ್ಯಕ್ರದ ವೇದಿಕೆಯಲ್ಲಾದರೂ ಕಿಚ್ಚ-ದಚ್ಚು ಒಂದಾಗಿ ಕಾಣಿಸಿಕೊಳ್ಳಲಿ ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಇಬ್ಬರ ನಡುವಿನ ಶೀತಲ ಸಮರದಿಂದಾಗಿ ಒಬ್ಬರು ಬರುವ ವೇದಿಕೆಗೆ ಮತ್ತೊಬ್ಬರು ಬರಲ್ಲ. ಆದರೆ ಅಪ್ಪು ನೆಪದಲ್ಲಾದರೂ ಈ ವೈಮನಸ್ಯ ಕೊನೆಯಾಗಲಿ ಎಂಬುದು ಅಭಿಮಾನಿಗಳ ಹಾರೈಕೆ.