Select Your Language

Notifications

webdunia
webdunia
webdunia
webdunia

ಫ್ಯಾನ್ಸ್ ಗೆ ಸಿಹಿ ಸುದ್ದಿ ಕೊಡಲು ಮುಂದಾದ ಪ್ರಭಾಸ್- ಅನುಷ್ಕಾ ಶೆಟ್ಟಿ?

ಫ್ಯಾನ್ಸ್ ಗೆ ಸಿಹಿ ಸುದ್ದಿ ಕೊಡಲು ಮುಂದಾದ ಪ್ರಭಾಸ್- ಅನುಷ್ಕಾ ಶೆಟ್ಟಿ?
ಹೈದರಾಬಾದ್ , ಶುಕ್ರವಾರ, 1 ಏಪ್ರಿಲ್ 2022 (11:00 IST)
ಹೈದರಾಬಾದ್: ಸ್ವೀಟಿ ಅನುಷ್ಕಾ ಶೆಟ್ಟಿ-ಪ್ರಭಾಸ್ ಜೋಡಿಯನ್ನು ಒಟ್ಟಾಗಿ ನೋಡಬೇಕೆಂಬುದು ಅಭಿಮಾನಿಗಳ ಬಯಕೆ. ಈ ಜೋಡಿ ಇದೀಗ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡಲು ಮುಂದಾಗಿದೆ.

ಬಾಹುಬಲಿ ನಂತರ  ಈ ಜೋಡಿ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಆದರೆ ಈಗ ಮತ್ತೆ ಹೊಸ ಸಿನಿಮಾವೊಂದರಲ್ಲಿ ಜೊತೆಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಪ್ರಭಾಸ್-ಅನುಷ್ಕಾ ನಿಜ ಜೀವನದಲ್ಲೂ ಮದುವೆಯಾಗಬೇಕು ಎಂಬುದು ಅಭಿಮಾನಿಗಳ ಆಸೆ. ಆದರೆ ಈ ಮ್ಯಾಜಿಕಲ್ ಜೋಡಿ ರಿಯಲ್ ಲೈಫ್ ನಲ್ಲಿ ಅಭಿಮಾನಿಗಳ ಆಸೆ ನೆರವೇರಿಸುತ್ತೋ ಬಿಡುತ್ತೋ, ಆದರೆ ಸಿನಿಮಾದಲ್ಲಿ ಮತ್ತೆ ಒಂದಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನಿರ್ದೇಶಕ ಮಾರುತಿ ಜೊತೆಗೆ ಹೊಸ ಸಿನಿಮಾವೊಂದನ್ನು ಪ್ರಭಾಸ್ ಮಾಡಲಿದ್ದಾರೆ. ಈ ಸಿನಿಮಾಗೆ ಅನುಷ್ಕಾ ನಾಯಕಿ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಪ್ರಕಟಣೆ ನೀಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿಬಲ್ ಆರ್ ಮೀರಿಸುತ್ತಾ ಕೆಜಿಎಫ್ 2?