Select Your Language

Notifications

webdunia
webdunia
webdunia
Wednesday, 9 April 2025
webdunia

ನಟ ಸೂರ್ಯ ಮುಂದಿನ ಸಿನಿಮಾದಲ್ಲಿ ಚಾನ್ಸ್‌ ಗಿಟ್ಟಿಸಿಕೊಂಡ ಪೂಜಾ ಹೆಗ್ಡೆ

Pooja Hegde

sampriya

ಹೈದರಾಬಾದ್ , ಭಾನುವಾರ, 2 ಜೂನ್ 2024 (10:56 IST)
Photo By X
ಹೈದರಾಬಾದ್:‌ ನಟ ಸೂರ್ಯ ಅವರ ಮುಂದಿನ 44ನೇ ಸಿನಿಮಾದಲ್ಲಿ ನಾಯಕಿಯಾಗಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಅವರನ್ನು ಫೈನಲ್‌ ಮಾಡಿರುವ ಬಗ್ಗೆ ಚಿತ್ರತಂಡ ದೃಢಪಡಿಸಿಕೊಂಡಿದೆ. 

ಸದ್ಯ ಚಿತ್ರಕ್ಕೆ ಸೂರ್ಯ 44 ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ನಿರ್ದೇಶದ ಕಾರ್ತಿಕ್‌  ಸುಬ್ಬರಾಜ್‌ ಅವರು ಚಿತ್ರದ ನಾಯಕಿಯನ್ನಾಗಿ ಪೂಜಾ ಹೆಗ್ಡೆ ಅವರನ್ನು ಆಯ್ಕೆಮಾಡಿರುವುದಾಗಿ ಟ್ವೀಟ್‌ ಮಾಡಿ ಖಚಿತಪಡಿಸಿದ್ದಾರೆ. ಅದಲ್ಲದೆ ಚಿತ್ರ ತಂಡಕ್ಕೆ ಪೂಜಾ ಅವರನ್ನು  ಸ್ವಾಗತಿಸಿದ್ದಾರೆ.

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ನಿರ್ದೇಶಕರು ಹೀಗೆ ಬರೆದಿದ್ದಾರೆ, "#Suriya44 ಗಾಗಿ @hegdepooja ಸ್ವಾಗತಿಸಲು ಸಂತೋಷವಾಗಿದೆ. #PoojaHegde #LoveLaughterWar #AKarthikSubbarajPadam ಆನ್‌ಬೋರ್ಡ್‌ಗೆ ಸ್ವಾಗತ."  ಎಂದು ಬರೆದುಕೊಂಡಿದ್ದಾರೆ.

ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ 'ಸೂರ್ಯ 44' ಚಿತ್ರವು 'ಪ್ರೀತಿ, ನಗು, ಯುದ್ಧ' ಎಂಬ ಅಡಿಬರಹದೊಂದಿಗೆ ಚಿತ್ರ ಕಥೆಯನ್ನು ಹೆಣೆಯಲಾಗಿದೆ. ಚಿತ್ರಕ್ಕೆ ಶ್ರೇಯಸ್ ಕೃಷ್ಣ ಅವರ ಛಾಯಾಗ್ರಹಣವಿದೆ. ಸಂತೋಷ್ ನಾರಾಯಣನ್ ಸಂಗೀತ ನೀಡಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಟುಂಬದ ಜತೆ ಜಾಲಿ ಮಾಡುತ್ತಿರುವ ತಾಯಿಯಾಗಲಿರುವ ದೀಪಿಕಾ ಪಡುಕೋಣೆ