Select Your Language

Notifications

webdunia
webdunia
webdunia
webdunia

ನಾಗಚೈತನ್ಯ ಜತೆಗಿನ ರೋಮ್ಯಾಂಟಿಕ್ ಸಿನಿಮಾದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ

Pooja Hegde

Sampriya

ಬೆಂಗಳೂರು , ಸೋಮವಾರ, 29 ಏಪ್ರಿಲ್ 2024 (16:25 IST)
Photo Courtesy X
ಬೆಂಗಳೂರು:  ನಟ ಪ್ರಭಾಸ್ ಜತೆ 'ರಾಧೆ ಶ್ಯಾಮ' ಸಿನಿಮಾದ ನಂತರ ಬಾಲಿವುಡ್‌ಗೆ ಹಾರಿದ್ದ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಅವರು ಇದೀಗ ಮತ್ತೇ ತೆಲುಗಿನ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆಂಬ ಸುದ್ದಿ  ಹರಿದಾಡುತ್ತಿದೆ.

ಇತ್ತೀಚಿನ ವದಂತಿಗಳ ಪ್ರಕಾರ ಪೂಜಾ ಹೆಗ್ಡೆ ಅವರ ಮುಂಬರುವ ಚಿತ್ರದಲ್ಲಿ ನಾಗ ಚೈತನ್ಯ ಜೊತೆ ನಟಿಸಲಿದ್ದಾರೆ ಎನ್ನಲಾಗಿದೆ.  ಎಲ್ಲವೂ ಅಂದುಕೊಂಡತ್ತೆ ನಡೆದರೆ ಚಿತ್ರೀಕರಣವನ್ನು ಅಕ್ಟೋಬರ್ 2024ರಲ್ಲಿ ಶೂಟಿಂಗ್ ಶುರುವಾಗಲಿದೆ. ಇದುವರೆಗೂ ಪೂಜಾ ಹೆಗ್ದೆ ಅವರು ಈ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಸ್ಪಷ್ಟಣೆಯನ್ನು ನೀಡಿಲ್ಲ.

ನಿರ್ದೇಶಕ ಕಾರ್ತಿಕ್ ದಂಡು ಬರೆದ ಕಥೆ ಕೇಳಿ ಇಷ್ಟವಾಗಿ ಚಿತ್ರತಂಡಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. 2024ರ ಅಕ್ಟೋಬರ್ ಶೂಟಿಂಗ್ ಶುರುವಾಗಲಿದೆ. 10 ವರ್ಷಗಳ ನಂತರ ಮತ್ತೆ ನಾಗಚೈತನ್ಯ ಹೊಸ ಚಿತ್ರಕ್ಕಾಗಿ ಸಾಥ್ ನೀಡಿದ್ದಾರೆ ಪೂಜಾ.

ಸದ್ಯ ನಾಗಚೈತನ್ಯ ಅವರು ತಾಂಡೇಲ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಹಲವು ವರ್ಷಗಳ ನಂತರ ಪೂಜಾ ಹೆಗ್ಡೆ ಹಾಗೂ ನಾಗಚೈತನ್ಯ ಅವರು ಜೋಡಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಾ..! ಊರ್ವಶಿ ರೌಟೇಲಾ ಒಳಉಡುಪಿಗೆ ಚಿನ್ನದ ಲೇಪನ