Publish Date: Thu, 14 Dec 2023 (08:40 IST)
Updated Date: Thu, 14 Dec 2023 (08:53 IST)
ಮುಂಬೈ: ಸೌತ್ ಸುಂದರಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ ಬಂದಿದೆ ಎನ್ನಲಾಗಿದ್ದು ಇದಕ್ಕೆಲ್ಲಾ ಮೂಲ ಕಾರಣ ದುಬೈನಲ್ಲಿ ನಡೆದಿದ್ದ ಜಗಳ ಎಂಬ ಸುದ್ದಿ ಹರಡಿದೆ.
ಟಾಲಿವುಡ್ ಬೆಡಗಿ ಪೂಜಾ ಹೆಗ್ಡೆ ದುಬೈನಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಪಪ್ಪಾರಾಜಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿಯ ಆಪ್ತರು ಅಂತಹ ಘಟನೆ ನಡೆದೇ ಇಲ್ಲ. ಅದೆಲ್ಲಾ ಸುಳ್ಳು ಸುದ್ದಿ ಎಂದಿದ್ದಾರೆ. ಆದರೆ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ ಬಂದಿದೆ ಎಂಬ ಸುದ್ದಿ ಕೇಳಿ ಅಭಿಮಾನಿಗಳಿಗೆ ಆತಂಕವಾಗಿತ್ತು. ಆದರೆ ಸ್ಪಷ್ಟನೆ ನೋಡಿ ನಿರಾಳವಾಗಿದೆ.
ಸಿನಿಮಾ ರಂಗದಲ್ಲೂ ಪೂಜಾ ಹೆಗ್ಡೆಗೆ ಇತ್ತೀಚೆಗೆ ಅಂತಹ ಯಶಸ್ಸು ಸಿಕ್ಕಿಲ್ಲ. ಕೆಲವು ಅವಕಾಶಗಳು ಕೈ ತಪ್ಪಿಹೋಗಿವೆ. ಇದೀಗ ಶಾಹಿದ್ ಕಪೂರ್ ನಾಯಕರಾಗಿರುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.