Webdunia - Bharat's app for daily news and videos

Install App

ಮದುವೆಗೆ ಆಹ್ವಾನ ಕೊಟ್ಟು ಷರತ್ತು ಹಾಕಿದ ನಟಿ ಪೂಜಾ ಗಾಂಧಿ

Webdunia
ಮಂಗಳವಾರ, 28 ನವೆಂಬರ್ 2023 (16:27 IST)
Photo Courtesy: Twitter
ಬೆಂಗಳೂರು: ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿ ನಾಳೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಅವರು ಮಾಧ್ಯಮಗಳಿಗೆ ಮದುವೆಯ ಕರೆಯೋಲೆ ನೀಡಿದ್ದಾರೆ.

ಆದರೆ ಮದುವೆ ಕರೆಯೋಲೆ ಜೊತೆ ಮಾಧ‍್ಯಮಗಳಿಗೆ ಷರತ್ತೊಂದನ್ನೂ ವಿಧಿಸಿದ್ದಾರೆ. ಅದೇನೆಂದರೆ ತಮ್ಮ ಮದುವೆಗೆ ಬರುವವರು ಯಾರೂ ಫೋಟೋ, ವಿಡಿಯೋ ಸೆರೆಹಿಡಿಯಲು ಕ್ಯಾಮರಾ ತರುವಂತಿಲ್ಲ. ಬೇಕಾದಷ್ಟು ಫೋಟೋಗಳನ್ನು ನಾನೇ ನಿಮಗೆಲ್ಲಾ ಕಳುಹಿಸಿಕೊಡುತ್ತೇನೆ ಎಂದು ಮಾಧ‍್ಯಮಗಳಿಗೆ ನಿರ್ಬಂಧ ವಿಧಿಸಿದ್ದಾರೆ.

ಲಾಜಿಸ್ಟಿಕ್ ಕಂಪನಿಯೊಂದರ ಮಾಲಿಕ ವಿಜಯ್ ಘೋರ್ಪಡೆಯವರೊಂದಿಗೆ ಪೂಜಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕುವೆಂಪು ಅವರ ಆಶಯದ ಮಂತ್ರ ಮಾಂಗಲ್ಯದ ಮೂಲಕ ಮದುವೆಯಾಗುತ್ತಿರುವುದಾಗಿ ಪೂಜಾ ತಿಳಿಸಿದ್ದಾರೆ.

ವಿಶೇಷವೆಂದರೆ ಮಾಧ‍್ಯಮಗಳಿಗೆ ಕನ್ನಡದಲ್ಲೇ ಪತ್ರ ಬರೆದು ಮದುವೆಗೆ ಕರೆಯೋಲೆ ನೀಡಿದ್ದಾರೆ. ಇತ್ತೀಚೆಗಷ್ಟೇ ಅವರು ಕನ್ನಡ ಬರೆಯಲೂ ಕಲಿತಿದ್ದರು. ಪಂಜಾಬಿ ಮೂಲದವರಾದರೂ ಕನ್ನಡ ಕಲಿತು ಕನ್ನಡಿಗರೇ ಆಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಸರಿಗಮಪ ಫೈನಲ್ ಗೆದ್ದ ಸ್ಪರ್ಧಿ ಇವರೇ, ಯಾರು ನೋಡಿ

ಮುಂದಿನ ಸುದ್ದಿ
Show comments