Select Your Language

Notifications

webdunia
webdunia
webdunia
webdunia

ಸುದೀಪ್ ಗೆ ಬೆದರಿಕೆ ಪತ್ರ: ಮತ್ತಷ್ಟು ಸ್ಪೋಟಕ ವಿಚಾರಗಳು ಬಹಿರಂಗ

ಸುದೀಪ್ ಗೆ ಬೆದರಿಕೆ ಪತ್ರ: ಮತ್ತಷ್ಟು ಸ್ಪೋಟಕ ವಿಚಾರಗಳು ಬಹಿರಂಗ
ಬೆಂಗಳೂರು , ಭಾನುವಾರ, 9 ಏಪ್ರಿಲ್ 2023 (16:48 IST)
ಬೆಂಗಳೂರು: ಕಿಚ್ಚ ಸುದೀಪ್ ಬಿಜೆಪಿಗೆ ಬೆಂಬಲ ಘೋಷಿಸುತ್ತಾರೆಂಬ ಸುದ್ದಿಯ ಬೆನ್ನಲ್ಲೇ ಅವರ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಎರಡು ಬೆದರಿಕೆ ಪತ್ರಗಳು ಬಂದಿದ್ದವು.

ಈ ಸಂಬಂಧ ಸುದೀಪ್ ಆಪ್ತರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪೊಲೀಸರು ತನಿಖೆ ನಡೆಸಿದ್ದು, ಕೆಲವು ಸ್ಪೋಟಕ ವಿಚಾರಗಳು ಬಯಲಾಗಿವೆ.

ನಂಬರ್ ಪ್ಲೇಟ್ ಬದಲಿಸಿದ್ದ ಸ್ವಿಫ್ಟ್ ಕಾರಿನಲ್ಲಿ ಬಂದ ಕಿಡಿಗೇಡಿಗಳು ಪತ್ರಗಳನ್ನು ಪೋಸ್ಟ್ ಬಾಕ್ಸ್ ಗೆ ಪೋಸ್ಟ್ ಮಾಡಿರುವುದು ಸಿಸಿಟಿವಿಯಿಂದ ತಿಳಿದುಬಂದಿತ್ತು. ಅದರಂತೆ ತನಿಖೆ ನಡೆಸಿರುವ ಪೊಲೀಸರಿಗೆ ಕಾರು ಕೆಂಗೇರಿ ಬಳಿಯ ವ್ಯಕ್ತಿಯದ್ದು ಎಂದು ಗೊತ್ತಾಗಿದೆ. ಆದರೆ ಕಾರಿನ ಅಸಲಿ ಮಾಲಿಕರನ್ನು ವಿಚಾರಣೆ ನಡೆಸಿದಾಗ ಬೆದರಿಕೆ ಪತ್ರಕ್ಕೂ ತನಗೂ ಸಂಬಂಧವೇ ಇಲ್ಲ ಎಂದಿದ್ದಾರೆ.  ಇದೀಗ ಪೊಲೀಸರು ಕಿಡಿಗೇಡಿಗಳಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿ ಪತ್ನಿ ಉಪಾಸನಾ ಜೊತೆ ರಾಮ್ ಚರಣ್ ಫಾರಿನ್ ಟ್ರಿಪ್