Publish Date: Sat, 25 Jan 2025 (10:21 IST)
Updated Date: Sat, 25 Jan 2025 (10:27 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ರೆಗ್ಯುಲರ್ ಜಾಮೀನು ಪಡೆದು ಹೊರಬಂದಿರುವ ಪವಿತ್ರಾ ಗೌಡ ಈಗ ಸೋಷಿಯಲ್ ಮೀಡಿಯಾದಲ್ಲಿ ಮೊದಲ ರೀಲ್ಸ್ ಪೋಸ್ಟ್ ಮಾಡಿದ್ದಾರೆ. ಆದರೆ ಈ ಪೋಸ್ಟ್ ನೋಡಿ ನೆಟ್ಟಿಗರು ಹುಷಾರಾಗಿ ಕಾಮೆಂಟ್ ಮಾಡ್ರಪ್ಪಾ ಎಂದು ಟ್ರೋಲ್ ಮಾಡಿದ್ದಾರೆ.
ಪವಿತ್ರಾ ಗೌಡ ಜೈಲಿನಿಂದ ರಿಲೀಸ್ ಆದ ಮೇಲೆ ಕೆಲವು ದಿನ ಮನೆಯಲ್ಲಿಯೇ ಇದ್ದರು. ಇದೀಗ ಶಿರಡಿ ಸಾಯಿಬಾಬ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಶಿರಡಿಗೆ ಭೇಟಿ ನೀಡಿರುವ ಪವಿತ್ರಾ ಗೌಡ ರೀಲ್ಸ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ.
ಇದರಲ್ಲಿ ಅನೇಕರು ಪವಿತ್ರಾ ಕಾಲೆಳೆದಿದ್ದೇ ಹೆಚ್ಚು. ನೋಡ್ಕೊಂಡು ಕಾಮೆಂಟ್ ಮಾಡ್ರಪ್ಪೋ. ಆಮೇಲೆ ಗೊತ್ತಲ್ಲ ಏನಾಗುತ್ತೋ ಅಂತ. ಗಾಡಿ ಓನರ್ ಸರಿ ಇದ್ರೂ ಓಡಿಸೋರು ಸರಿ ಇಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ನಾನೇನು ಕಾಮೆಂಟ್ ಮಾಡಲ್ಲಪ್ಪಾ ಆಮೇಲೆ ಎತ್ತಾಕೊಂಡು ಶೆಡ್ ಗೆ ಹೋಗ್ತಾರೆ ಎಂದು ಟ್ರೋಲ್ ಮಾಡಿದ್ದಾರೆ.
ಈ ಮೊದಲು ರೇಣುಕಾಸ್ವಾಮಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಕ್ಕೇ ಪವಿತ್ರಾ ತನ್ನ ಆಪ್ತ ಪವನ್ ಗೆ ಹೇಳಿ ಆತನನ್ನು ಸಿಕ್ಕಿ ಹಾಕಿಸಿದ್ದಳು. ಈ ವಿಚಾರ ದರ್ಶನ್ ಗೆ ಗೊತ್ತಾಗಿ ದರ್ಶನ್ ಆತನನ್ನು ಪಟ್ಟಣಗೆರೆ ಶೆಡ್ ಗೆ ಕರೆಸಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಇದೇ ವಿಚಾರಕ್ಕೆ ಈಗ ಪವಿತ್ರಾ ಗೌಡರನ್ನು ಟ್ರೋಲ್ ಮಾಡಿದ್ದಾರೆ.
Krishnaveni K
Publish Date: Sat, 25 Jan 2025 (10:21 IST)
Updated Date: Sat, 25 Jan 2025 (10:27 IST)