Select Your Language

Notifications

webdunia
webdunia
webdunia
webdunia

ಹೊಸ ರೂಪದಲ್ಲಿ ಮತ್ತೇ ಮರು ಬಿಡುಗಡೆಯಾಗಲಿದೆ ಸಂಜು ವೆಡ್ಸ್ ಗೀತಾ 2

Sanju Weds Geeta 2 Re Release, Actress Rachita Ram, Actor SriNagara Kitty

Sampriya

ಬೆಂಗಳೂರು , ಶುಕ್ರವಾರ, 24 ಜನವರಿ 2025 (19:38 IST)
Photo Courtesy X
ಬೆಂಗಳೂರು:  ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದ ಶ್ರೀನಗರ ಕಿಟ್ಟಿ, ರಚಿತಾ ರಾಮ್ ಅಭಿನಯಿಸಿದ್ದ ಸಂಜು ವೆಡ್ಸ್ ಗೀತಾ 2 ಸಿನಿಮಾ ಇದೀಗ ಮತ್ತೇ  ಮರು ಬಿಡುಗಡೆ ಮಾಡಲಾಗುತ್ತಿದೆ.

ಜನವರಿ 10 ರಂದು ಸಿನಿಮಾ ಬಿಡುಗಡೆ ಆಗಬೇಕಿತ್ತು ಆದರೆ ಸಿನಿಮಾ ಮೇಲೆ ಕೇಸು ದಾಖಲಾದ ಕಾರಣ ಸಿನಿಮಾದ ಬಿಡುಗಡೆ ಒಂದು ವಾರ ತಡವಾಗಿ ಜನವರಿ 17 ರಂದು ತೆರೆಗೆ ಬಂತು. ರಿಲೀಸ್ ಆದರೂ ಅಷ್ಟೇನೂ ಒಳ್ಳೆಯ ವಿಮರ್ಶೆ ಪಡೆದಿರಲಿಲ್ಲ. ಇದೀಗ  'ಸಂಜು ವೆಡ್ಸ್ ಗೀತಾ 2' ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿರ್ಮಾಪಕ ಛಲವಾದಿ‌ ಕುಮಾರ್ ಹಾಗೂ ನಿರ್ದೇಶಕ ನಾಗಶೇಖರ್ ಅವರು, ಸಂಜು ವೆಡ್ಸ್ ಗೀತಾ 2 ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಒಂದಷ್ಟು ಆತಂಕ ಸೃಷ್ಟಿಯಾಗಿದ್ದ ಕಾರಣ ತುಸು ಆತುರದಲ್ಲಿ ಸಿನಿಮಾ ಬಿಡುಗಡೆ ಮಾಡಬೇಕಾಯ್ತು.

ಸಿನಿಮಾದಲ್ಲಿದ್ದ ಕೆಲ ಕೊರತೆಗಳನ್ನು ಸರಿ ಮಾಡಲು ಚಿತ್ರತಂಡಕ್ಕೆ ಸಾಧ್ಯ ಆಗಿರಲಿಲ್ಲ. ಹಾಗಾಗಿ ಕಳೆದ ಜನವರಿ 20ರಿಂದಲೇ ಸಂಜು ವೆಡ್ಸ್ ಗೀತಾ-2 ಚಿತ್ರದ ಪ್ರದರ್ಶನವನ್ನು ವಿತರಕರಿಗೆ ಹೇಳಿ ಎಲ್ಲಾ ಕೇಂದ್ರಗಳಲ್ಲಿ ಸ್ಥಗಿತಗೊಳಿಸಲಾಗಿದೆ. ಇದೀಗ ಸಿನಿಮಾಗೆ 20ನಿಮಿಷಗಳ ಹೃದಯ ಸ್ಪರ್ಶಿ ಚಿತ್ರಣವನ್ನು ಚಿತ್ರಕ್ಕೆ ಮರು ಜೋಡಿಸಲಾಗುತ್ತಿದೆ, ಇನ್ಮುಂದೆ ನವನವೀನ ರೂಪದಲ್ಲಿ ‘ಸಂಜು ವೆಡ್ಸ್ ಗೀತಾ 2’ ಮೂಡಿಬರುತ್ತಿದೆ, ಚಿತ್ರದ ರೀ-ರಿಲೀಸ್ ದಿನಾಂಕವನ್ನು ಅತಿ ಶೀಘ್ರದಲ್ಲೇ ಪ್ರಕಟಿಸುವುದಾಗಿ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

BigBoss Season 11: ಹನಮಂತುಗೆ ಬೆಂಬಲ ಸೂಚಿಸಿದ ಮಾಜಿ ರನ್ನರ್