ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಪವಿತ್ರಾ ಗೌಡಗೆ ಮಗಳು ಖುಷಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಂದೇಶ ಬರೆದಿದ್ದಾಳೆ.
ಪವಿತ್ರಾ ಗೌಡ ಪುತ್ರಿ ಖುಷಿ ಗೌಡ ಅಮ್ಮ ಜೈಲು ಸೇರಿಕೊಂಡಾಗಿನಿಂದ ಅಮ್ಮನ ಬಗ್ಗೆ ಇದು ಎರಡನೇ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ನನ್ನ ಅಮ್ಮ ನನ್ನ ಸ್ಪೂರ್ತಿ. ಕಷ್ಟವನ್ನೂ ಹೇಗೆ ಎದುರಿಸುವುದೆಂದ ಹೇಳಿಕೊಟ್ಟಿದ್ದಾಳೆ ಎಂದು ಬರೆದುಕೊಂಡಿದ್ದಾಳೆ.
ಅಮ್ಮನ ಬಗ್ಗೆ ಖುಷಿ ಬರೆದ ಮೆಸೇಜ್ ಹೀಗಿದೆ. ನನ್ನ ಅಮ್ಮ ನನ್ನ ಸ್ಪೂರ್ತಿ. ಏನೇ ಕಷ್ಟ ಬಂದರೂ ಹೇಗೆ ಗಟ್ಟಿಯಾಗಿ ನಿಲ್ಲಬೇಕು ಎಂದು ಅವಳು ಹೇಳಿಕೊಟ್ಟಿದ್ದಾಳೆ. ನನ್ನೊಂದಿಗೆ ಯಾವತ್ತೂ ಮುಕ್ತ ಮತ್ತು ಬೆಂಬಲವಾಗಿ ನಿಂತಿದ್ದಳು. ಆಕೆ ಕೋಟಿಗೊಬ್ಬಳು. ಅವಳಂತಹ ಇನ್ನೊಬ್ಬ ವ್ಯಕ್ತಿಯನ್ನು ನಾನು ನೋಡಿಲ್ಲ. ಅವಳಂತಹ ಅಮ್ಮನ ಪಡೆಯಲು ನಾನು ಅದೃಷ್ಟ ಮಾಡಿದ್ದೇನೆ ಎಂದು ಖುಷಿ ಬರೆದುಕೊಂಡಿದ್ದಾಳೆ.
ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲು ಸೇರಿದ ಮೇಲೆ ಖುಷಿ ಗೌಡ ಆಗಾಗ ತನ್ನ ಅಜ್ಜಿ ಜೊತೆ ಜೈಲಿಗೆ ಬಂದು ಅಮ್ಮನನ್ನು ಭೇಟಿ ಮಾಡಿಕೊಂಡು ಹೋಗಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲೂ ತನ್ನ ಅಮ್ಮನ ರೆಡ್ ಕಾರ್ಪೆಟ್ ಸ್ಟುಡಿಯೋ ಉತ್ಪನ್ನಗಳ ಪ್ರಚಾರ ಮಾಡುತ್ತಾ ಅಮ್ಮನ ಜವಾಬ್ಧಾರಿಯನ್ನು ನಿಭಾಯಿಸುತ್ತಿದ್ದಾಳೆ.