ಬೆಂಗಳೂರು: ಯೋಗರಾಜ ಭಟ್ಟರು ಹಾಡಿನ ಸಾಹಿತ್ಯದ ಮೂಲಕ ಸುದ್ದಿಯಾಗುವುದು ಇದೇ ಮೊದಲಲ್ಲ.  ಅವರ ಹಾಡುಗಳು ಪಡ್ಡೆ ಹೈಕಳಿಗೆ ಬಹಳ ಇಷ್ಟವಾಗುವುದು ಅದರ ಸಾಲುಗಳಿಂದ.
									
										
								
																	
ಆದರೆ ಈಗ ಭಟ್ಟರ ನಿರ್ದೇಶನದಲ್ಲಿ ಬರುತ್ತಿರುವ ‘ಪಂಚತಂತ್ರ’ ಸಿನಿಮಾದ ಅವರೇ ಬರೆದಿರುವ ‘ಶೃಂಗಾರದ ಹೊಂಗೇಮರ’ ಎನ್ನುವ ರೊಮ್ಯಾಂಟಿಕ್ ಸಾಂಗ್ ಒಂದು ಯೂ ಟ್ಯೂಬ್ ನಲ್ಲಿ ಸಂಚಲನ ಮೂಡಿಸುತ್ತಿದೆ.
									
			
			 
 			
 
 			
			                     
							
							
			        							
								
																	ಮೈ ಬಿಸಿಯೇರಿಸುವ ಈ ಹಾಡು ಈಗಾಗಲೇ 10 ಸಾವಿರಕ್ಕಿಂತಲೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಇಮ್ರಾನ್ ಸರ್ದಾರಿಯಾ ಕೊರಿಯಾಗ್ರಾಫ್ ಮಾಡಿರುವ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದು, ರಸಿಕತೆ ಉತ್ತುಂಗದಲ್ಲಿದೆ. ಹೊಸ ರೀತಿಯಲ್ಲಿ ಚಿತ್ರೀಕರಿಸಲಾಗಿರುವ ಈ ಹಾಡನ್ನು ಒಮ್ಮೆ ನೀವೂ ನೋಡಿ!
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ