Select Your Language

Notifications

webdunia
webdunia
webdunia
webdunia

ರಾಬರ್ಟ್ ಎಂದು ಹೆಸರಿಟ್ಟು ಚಾಲೆಂಜಿಂಗ್ ಸ್ಟಾರ್ ದರ್ಶನ್ ರದ್ದು ಇದೆಂಥಾ ಹೊಸ ಅವತಾರ?!

ರಾಬರ್ಟ್ ಎಂದು ಹೆಸರಿಟ್ಟು ಚಾಲೆಂಜಿಂಗ್ ಸ್ಟಾರ್ ದರ್ಶನ್ ರದ್ದು ಇದೆಂಥಾ ಹೊಸ ಅವತಾರ?!
ಬೆಂಗಳೂರು , ಬುಧವಾರ, 26 ಡಿಸೆಂಬರ್ 2018 (09:21 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತರುಣ್ ಸುಧೀರ್ ನಿರ್ದೇಶನದಲ್ಲಿ ರಾಬರ್ಟ್ ಎನ್ನುವ ಸಿನಿಮಾ ಒಪ್ಪಿಕೊಂಡ ಸುದ್ದಿ ಓದಿರುತ್ತೀರಿ. ಇದೀಗ ಆ ಚಿತ್ರದ ಫಸ್ಟ್ ಲುಕ್ ನ್ನು ತರುಣ್ ಬಿಡುಗಡೆ ಮಾಡಿದ್ದು, ಹೆಸರಿಗೂ, ಪೋಸ್ಟರ್ ಗೂ ಸಂಬಂಧವೇ ಇಲ್ಲದಂತಿದೆ.

webdunia
ರಾಬರ್ಟ್ ಎನ್ನುವ ಹೆಸರು ಕ್ರಿಶ್ಚಿಯನ್ ಧರ್ಮದ ಹೆಸರಾದರೂ, ಈ ಚಿತ್ರದ ಪೋಸ್ಟರ್ ನಲ್ಲಿ ದರ್ಶನ್ ಆಂಜನೇಯ ವೇಷಧಾರಿಯಾಗಿ ಹೆಗಲ ಮೇಲೆ ಶ್ರೀರಾಮನನ್ನು ಹೊತ್ತುಕೊಂಡ ಫೋಟೋವಿದೆ. ಹೀಗಾಗಿ ಪ್ರೇಕ್ಷಕರು ತಲೆಗೆ ಹುಳ ಬಿಟ್ಟುಕೊಳ್ಳುವಂತಾಗಿದೆ.

ಇದೇ ಈ ಚಿತ್ರದ ವಿಶೇಷವಂತೆ. ರಾಬರ್ಟ್ ಎಂಬ ಹೆಸರಿಟ್ಟುಕೊಂಡು ಆಂಜನೇಯನ ವೇಷ ಹಾಕಿದ್ದೇಕೆ ಎಂದು ಚಿತ್ರದಲ್ಲಿ ನಿರ್ದೇಶಕರು ವಿವರಿಸಲಿದ್ದಾರಂತೆ. ಅದುವೇ ಈ ಚಿತ್ರದ ಕತೆ ಎಂದು ಸುಳಿವು ಬಿಟ್ಟುಕೊಡಲಾಗಿದೆ.

ಈಗೀಗ ಫಸ್ಟ್ ಲುಕ್ ನಲ್ಲಿ ಹೊಸ ರೀತಿಯ, ವಿಚಿತ್ರ ಪೋಸ್ ಕೊಟ್ಟು ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸುವ ಟ್ರೆಂಡ್ ಸೃಷ್ಟಿಯಾಗಿದೆ. ಅದಕ್ಕೀಗ ಈ ಚಿತ್ರ ಮತ್ತೊಂದು ಸೇರ್ಪಡೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಶಾರುಖ್ ಖಾನ್ ಜೀರೋ ಹಿಂದಿಕ್ಕಿದ್ದ ಕೆಜಿಎಫ್: ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು ಗೊತ್ತಾ?